ಬೀದರ್ | ಜ.26ರಂದು ಸಂವಿಧಾನ ಮೌಲ್ಯಗಳ ಜನ ಜಾಗೃತಿ ಸಮಾವೇಶ : ಅನಿಲಕುಮಾರ್ ಬೆಲ್ದಾರ್

ಬೀದರ್ : ಜ.26ರ ಸಾಯಂಕಾಲ 5 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಗಣರಾಜ್ಯೋತ್ಸವ ದಿನದ ನಿಮಿತ್ಯ 'ಸಂವಿಧಾನ ಮೌಲ್ಯಗಳ ಜನ ಜಾಗೃತಿ ಸಮಾವೇಶ' ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಮುಖಂಡ ಅನಿಲಕುಮಾರ್ ಬೆಲ್ದಾರ್ ಅವರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜ.26ರಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಆಯೋಜನಾ (ಸಂವಿಧಾನ ಜಾರಿಯಾದ) ಸಮಿತಿ ವತಿಯಿಂದ 'ಸಂವಿಧಾನ ಮೌಲ್ಯಗಳ ಜನ ಜಾಗೃತಿ ಕಾರ್ಯಕ್ರಮ' ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ನಟ ದುನಿಯಾ ವಿಜಯ ಅವರು ಆಗಮಿಸುತ್ತಿದ್ದಾರೆ. ಗಣರಾಜ್ಯೋತ್ಸವ ಒಂದು ರಾಷ್ಟ್ರೀಯ ಹಬ್ಬವಾಗಿದ್ದರಿಂದ ಜಾತಿ, ಮತ, ಪಂಥ ಮರೆತು ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಹಾಗೆಯೇ ಜಿಲ್ಲೆಯ ಎಲ್ಲ ಚುನಾಯಿತ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ದಲಿತ ಮುಖಂಡ ಬಾಬುರಾವ್ ಪಾಸ್ವಾನ್ ಅವರು ಮಾತನಾಡಿ, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಭೀಕ್ಕು ಸಂಘ ವಹಿಸಲಿದೆ. ಸಚಿವ ರಹೀಂ ಖಾನ್ ಅವರು ವಿಶೇಷ ಆಹ್ವಾನಿತರಾಗಿದ್ದಾರೆ. ಮುಖ್ಯ ಭಾಷಣಕಾರರಾಗಿ ರಾಜೇಶ್ವರಿ ಮೊರೆ ಹಾಗೂ ವಿಜಯಕುಮಾರ್ ಸಾಲಿಮನಿ ಅವರು ಅವರು ಆಗಮಿಸುತ್ತಿದ್ದಾರೆ. ಹಾಗಾಗಿ ಜಿಲ್ಲೆಯ ಎಲ್ಲ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಶಿವಕುಮಾರ್ ತುಂಗಾ, ಕಾರ್ಯಕ್ರಮ ಸಭಾಧ್ಯಕ್ಷ ಮುಕೇಶ್ ರಾಯ್, ಮಹೇಶ್ ಗೋರನಾಳಕರ್, ವಿಷ್ಣುವರ್ಧನ್ ವಾಲ್ದೋಡಿ, ಅಂಬಾದಾಸ್ ಗಾಯಕವಾಡ್, ಶ್ರೀಪತಿರಾವ್ ದೀನೆ, ಶಿವಕುಮಾರ್ ನೀಲಿಕಟ್ಟಿ, ಸಂಜುಕುಮಾರ್ ಮೇತ್ರೆ, ಶ್ರೀಕಾಂತ್ ಭವಾನಿ, ಸಂದೀಪ್ ಕಾಂಟೆ, ಜನಾರ್ಧನ್ ದೀನೆ, ಗೌತಮ್ ಭೋಸ್ಲೆ ಹಾಗೂ ರಾಹುಲ್ ಡಾಂಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು.







