Bidar | ದಲಿತ ಪ್ಯಾಂಥರ್ ಸಂಘಟನೆಯ ರಾಜ್ಯಾಧ್ಯಕ್ಷರಾಗಿ ರಾಹುಲ್ ದಲಾಲೆ ನೇಮಕ

ಬೀದರ್ : ಬಸವಕಲ್ಯಾಣ ತಾಲೂಕಿನ ಮಾಂಠಾಳ್ ಗ್ರಾಮದ ರಾಹುಲ್ ದಲಾಲೆ ಅವರನ್ನು ದಲಿತ ಪ್ಯಾಂಥರ್ ಸಂಘಟನೆಯ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
1972ರಲ್ಲಿ ನಾಮದೇವ ಢಸಾಳ್ ಅವರು ಮುಂಬಯಿನಲ್ಲಿ ಸ್ಥಾಪಿಸಿದ್ದ ದಲಿತ ಪ್ಯಾಂಥರ್ ಸಂಘಟನೆ ದೇಶಾದ್ಯಂತ ಸಾಮಾಜಿಕ ಹೋರಾಟಗಳ ಮೂಲಕ ಗುರುತಿಸಿಕೊಂಡಿದೆ.
ಸಂಘಟನೆಯ ರಾಷ್ಟ್ರಾಧ್ಯಕ್ಷ ಬಾಳಾಸಾಹೇಬ್ ಪಡವಾಳಕರ್ ಹಾಗೂ ಮಹಾರಾಷ್ಟ್ರ ರಾಜ್ಯಾಧ್ಯಕ್ಷ ಡಾ.ಘನಶಾಮ್ ಭೋಸ್ಲೆ ಅವರ ನೇತೃತ್ವದಲ್ಲಿ ರಾಹುಲ್ ದಲಾಲೆ ಅವರಿಗೆ ಕರ್ನಾಟಕ ರಾಜ್ಯಾಧ್ಯಕ್ಷರ ಹುದ್ದೆ ನೀಡಲಾಗಿದ್ದು, ಈ ಕುರಿತು ಅಧಿಕೃತ ಆದೇಶ ಹೊರಡಿಸಲಾಗಿದೆ
Next Story




