ಬೀದರ್ | ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿನ ಹುದ್ದೆಗಳನ್ನು ಮರು ನೇಮಕಾತಿ ಮಾಡಲು ಮನವಿ

ಬೀದರ್ : ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಮಿಶನ್ ಮತ್ತು ರಾಷ್ಟ್ರೀಯ ಪೋಷಣ ಅಭಿಯಾನ ಯೋಜನೆಯ ಹಲವು ಹುದ್ದೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಮರು ನೇಮಕಾತಿ ಮಾಡಲು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಜಾತ್ಯತಿತ ಜನತಾದಳ ಮನವಿ ಸಲ್ಲಿಸಿದೆ.
ಮನವಿ ಪತ್ರದಲ್ಲಿ ಈ ಹಗರಣದ ಬಗ್ಗೆ ಫೆಬ್ರವರಿಯಲ್ಲಿ ಜಿಲ್ಲಾ ವಿದ್ಯಾರ್ಥಿ ಜನತಾದಳ ಪಕ್ಷದ ವತಿಯಿಂದ ಪತ್ರಿಕಾಗೊಷ್ಠಿ ನಡೆದಿದೆ. ಮೇ ತಿಂಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರಿಗೆ ಈ ನೇಮಕಾತಿ ಹಗರಣದ ವಿರುದ್ದ ಒಂದು ದಿನದ ಸಾಂಕೇತಿಕ ಧರಣಿ ಕೂಡ ನಡೆದಿಸಿದ್ದೇವೆ. ಜನವರಿಯಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್ ಅವರು, ಉಪನಿರ್ದೇಶಕ ಶ್ರೀಧರ್ ಅವರ ವಿರುದ್ದ ಇಲಾಖಾ ವಿಚಾರಣ ನಡೆಸಲು ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿಗಳನ್ನು ಸೂಚಿಸಿದ್ದಾರೆ. ಆದರೂ ಕೂಡ ಇವರ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಧರ್ ಅವರನ್ನು ಕೂಡಲೇ ಅಮಾನತುಗೊಳಿಸಬೇಕು. ಹಾಗೆಯೇ ಈ ನೇಮಕವಾದ ಹುದ್ದೆಗಳನ್ನು ಮರು ನೇಮಕಾತಿ ಮಾಡಬೇಕು. ಇಲ್ಲದಿದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಜಾತ್ಯತಿತ ಜನತಾದಳ (ವಿದ್ಯಾರ್ಥಿ ಘಟಕ) ಜಿಲ್ಲಾಧ್ಯಕ್ಷ ಅಭಿಕಾಳೆ, ಅರುಣ್ ವರ್ಮಾ, ಜಿ.ಎಮ್. ಕ್ರಿಸ್ಟಫೋರ್, ಸಿಮನ್ ಕಾಳೆ, ರವಿ ಸಿರ್ಸಿ ಹಾಗೂ ಬಸವರಾಜ್ ಶಾಪೂರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.