ಬೀದರ್ | ರೋಟರಿ ಕ್ಲಬ್ ಸಿಲ್ವರ್ ಸ್ಟಾರ್ ವತಿಯಿಂದ ಬಿದರಿ ವೃತ್ತ ಸುಂದರಿಕರಣಕ್ಕೆ ಚಾಲನೆ

ಬೀದರ್ : ನಗರದ ಯುವ ಮನಸ್ಸುಗಳನ್ನು ಒಳಗೊಂಡಿರುವ ಬೀದರ್ ರೋಟರಿ ಕ್ಲಬ್ ಸಿಲ್ವರ್ ಸ್ಟಾರ್ ಬೀದರ್ ನಗರದ ಸುಂದರೀಕರಣಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದು, ನಗರದ ಬಿದರಿ ವೃತ್ತದ ಸುತ್ತ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಬೀದರ್ ಜಿಲ್ಲೆಯ ಹೆಮ್ಮೆಯ ಪ್ರತೀಕವಾದ ಬಿದರಿ ಕಲೆಯ ಸ್ಮರಣಾರ್ಥವಾಗಿ ಐತಿಹಾಸಿಕ ನಗರದ ಹೈದರಾಬಾದ್ ರಸ್ತೆಯಲ್ಲಿ ನಿರ್ಮಿಸಿರುವ ಬಿದರಿ ವೃತ್ತ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತನ್ನ ಕಳೆಯನ್ನು ಕಳೆದುಕೊಂಡಿತ್ತು. ಈ ಹಿನ್ನಲೆಯಲ್ಲಿ ರೋಟರಿ ಸಿಲ್ವರ್ ಸ್ಟಾರ್‌ನಿಂದ ವೃತ್ತ ಶುಚಿಗೊಳಿಸಿ, ವೃತ್ತದ ಸುತ್ತ ಸಸಿಗಳನ್ನು ನೆಟ್ಟು, ಬಿದರಿ ವೃತ್ತಕ್ಕೆ ಜೀವ ಕಳೆ ತುಂಬಲು ಹೊರಟಿದ್ದಾರೆ.
ಇದೇ ವೇಳೆ ವೃತ್ತದ ಸುಂದರಿಕರಣದ ಮಾಡಲ್ ಫೊಸ್ಟರ್ ಬಿಡುಗಡೆ ಮಾಡಿದ ರೋಟರಿ ಇಂಟರ್ ನ್ಯಾಷನಲ್ 3,160 ಜಿಲ್ಲಾ ಗವರ್ನರ್ ಎಂ.ಕೆ ರವೀಂದ್ರ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ರೋಟರಿ ಸಿಲ್ವರ್ ಸ್ಟಾರ್ ನ ಅಧ್ಯಕ್ಷ ಆದಿಶ್ ವಾಲಿ, ಕಾರ್ಯದರ್ಶಿ ಕಿರಣ್ ಸ್ಯಾಮವೆಲ್, ರೋಟರಿಯ ಅಸಿಸ್ಟ್ಂಟ್ ಗವರ್ನರ್ ಹಾವಶೆಟ್ಟಿ ಪಾಟೀಲ್, ಉಪಾಧ್ಯಕ್ಷ ಆನಂದ್ ಕೊಟರ್ಕಿ, ಜಾಯಿಂಟ್ ಸೆಕ್ರೆಟರಿ ಭಾವೇಶ್ ಪಟೇಲ್, ಖಜಾಂಚಿ ಅಮರೇಶ್ ಅಭಸಂಗೆ, ಯೋಜನಾ ನಿರ್ದೇಶಕ ಆನಂದ್ ಕುಲಕರ್ಣಿ, ಪೂಜಾ ಕೊಂಡಿ, ಕೀರ್ತಿ ವಾಲೆ, ಸದಸ್ಯತ್ವ ಅಭಿವೃದ್ಧಿ ನಿರ್ದೇಶಕಿ ಸ್ಪೂರ್ತಿ ಧನ್ನೂರ್, ಮಾಧ್ಯಮ ಸಂಯೋಜಕಿ ಸಹನಾ ಪಾಟೀಲ್, ರಾಘವೇಂದ್ರ ರಿಜೆಂತಲ್, ಮನೀಶ್ ಸಿಂಧೋಲ್, ಮಂಜುನಾಥ್ ಖೂಬಾ ಹಾಗೂ ಮಾಜಿ ಕಾರ್ಯದರ್ಶಿ ಪೂಜಾ ಸ್ಯಾಮವೆಲ್ ಸೇರಿದಂತೆ ಸಿಲ್ವರ್ ಸ್ಟಾರ್ ನ ಪದಾಧಿಕಾರಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.







