ಬೀದರ್ | ಕೌಠಾ ಸೇತುವೆ ಮೇಲಿಂದ ಜಿಗಿದ ಯುವಕನಿಗಾಗಿ ಮುಂದುವರಿದ ಶೋಧ

ಬೀದರ್ : ಕೌಠಾ ಸೇತುವೆ ಮೇಲಿನಿಂದ ನದಿಗೆ ಶುಕ್ರವಾರ ಸಂಜೆ ಜಿಗಿದಿದ್ದಾನೆ ಎನ್ನಲಾದ ಯುವಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಕುಮಟಿ ಗ್ರಾಮದ ನಿವಾಸಿ ಕೃಷ್ಣ ನಾರಲ್ವಾರ್(30) ಸೇತುವೆ ಮೇಲಿಂದ ನದಿಗೆ ಜಿಗಿದ ಯುವಕ. ಎರಡು ದಿನಗಳಿಂದ ಕೃಷ್ಣರಿಗಾಗಿ ಪೊಲೀಸ್ ಮತ್ತು ಅಗ್ನಿಶಾಮಕ ದಳ ಹುಡುಕಾಟ ನಡೆಸುತ್ತಿದೆ.
ಕ್ಷಯ ರೋಗದಿಂದ ಬಳಲುತ್ತಿದ್ದ ಕೃಷ್ಣ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅನಾರೋಗ್ಯ ಕಾರಣ ಮನನೊಂದಿದ್ದ ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಎರಡು ದಿನಗಳಿಂದ ಹುಡುಕಾಟ ನಡೆಸುತ್ತಿದ್ದರೂ ಕೃಷ್ಣ ಪತ್ತೆಯಾಗಿಲ್ಲ. ಇಂದು ಬೆಳಗ್ಗೆಯಿಂದ ಶೋಧಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಸಂತಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





