ಬೀದರ್ | ಬಾಲಕಿಯರ ಕುಸ್ತಿ ಪಂದ್ಯದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಶೋಭಾ

ಬೀದರ್ : 2025-26ನೇ ಶೈಕ್ಷಣಿಕ ವರ್ಷದ ಪ್ರೌಢ ಶಾಲಾ ವಿಭಾಗದಲ್ಲಿ ಔರಾದ್ ನ ನಾಲಂದಾ ಪ್ರೌಢ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಶೋಭಾ ತಂದೆ ಸಂತೋಷ್ ಎಂಬ ವಿದ್ಯಾರ್ಥಿನಿಯು ಬಾಲಕಿಯರ ಕುಸ್ತಿ ಪಂದ್ಯದಲ್ಲಿ ಜಿಲ್ಲಾ ಮಟ್ಟದಲ್ಲಿ ಅಪ್ರತಿಮ ಸಾಧನೆಗೈದು, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಔರಾದ್ ತಾಲ್ಲೂಕಿನ ಬೆಳಕುಣಿ (ಬಿಎಚ್) ಗ್ರಾಮದ ನಿವಾಸಿಯಾದ ಶೋಭಾ, ಜಿಲ್ಲಾ ಮಟ್ಟದ ಬಾಲಕಿಯರ ಕುಸ್ತಿ ಪಂದ್ಯದಲ್ಲಿ ತನ್ನ ಎದುರಾಳಿಯನ್ನು ಸೋಲಿಸಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ, ಶಾಲೆಗೆ ಕೀರ್ತಿ ತಂದಿದ್ದಾಳೆ.
ಅವಳ ಈ ಸಾಧನೆಯನ್ನು ಶ್ಲಾಘೀಸಿ ಶಾಲೆಯ ಶಿಕ್ಷಕರು ಆಕೆಯನ್ನು ಸನ್ಮಾನ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಎಸ್ ಪಿ ಕೆ ಸಂಸ್ಥೆಯ ಅಧ್ಯಕ್ಷ ಕೆ.ಪುಂಡಲೀಕರಾವ್, ಶಾಲೆಯ ಮುಖ್ಯಗುರು ಜಗನ್ನಾಥ್ ಬಿರಾದಾರ್, ದೈಹಿಕ ಶಿಕ್ಷಕ ಸುನೀಲಕುಮಾರ್ ವಾಗಮೋಡೆ, ಸಹ ಶಿಕ್ಷಕರಾದ ದಿಲೀಪಕುಮಾರ್ ಮೇತ್ರೆ, ಮಲ್ಲಿಕಾರ್ಜುನ್ ಕೋಟೆ, ಪರಮೇಶ್ವರ್ ಬಿರಾದಾರ್, ಸಿದ್ಧಾರ್ಥ ಕಾಂಬಳೆ, ಅಸ್ಪಾಕಮಿಯ್ಯಾ ಬೇಗ್ ಹಾಗೂ ಸಹ ಶಿಕ್ಷಕಿಯರಾದ ಪ್ರೀಯಾ ಬಿರಾದಾರ್, ಜ್ಯೋತಿ ಘೂಳೆ ಹಾಗೂ ಜ್ಞಾನೇಶ್ವರಿ.ಎಸ್ ಹಾಗೂ ಬೋಧಕೇತರ ಸಿಬ್ಬಂಧಿ ವರ್ಗದವರು ಇವಳ ಸಾಧನೆಗೆ ಹರ್ಷಿಸಿ, ಮನದುಂಬಿ ಅಭಿನಂದಿಸಿದ್ದಾರೆ.







