ಬೀದರ್ | ಅ.26 ರಂದು ಸಿಂಧೂರ್ ರಕ್ಷಕ ಓಟ : ಕರ್ನಲ್ ಶರಣಪ್ಪ ಸಿಕೆನಪುರೆ

ಬೀದರ್ : ರೋಟರಿ ಕ್ಲಬ್ ಬೀದರ್ ಸಹಕಾರದಲ್ಲಿ ಗ್ಲೋಬಲ್ ಸೈನಿಕ್ ಅಕಾಡೆಮಿ ಶಾಲೆಯ ದಶಮಾನೋತ್ಸವದ ಅಂಗವಾಗಿ ಅ.26ರಂದು ಸಿಂಧೂರ್ ರಕ್ಷಕ ಓಟ ಆಯೋಜಿಸಲಾಗಿದೆ ಎಂದು ಕರ್ನಲ್ ಶರಣಪ್ಪ ಸಿಕೆನಪುರೆ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಕಾರ್ಯಕ್ರಮದ ಪ್ರಯುಕ್ತ ನ.1 ರಂದು ಶಾಲೆಯ ಆವರಣದಲ್ಲಿ ಧ್ವಜಾರೋಹಣ, ಮಾಚ್‌ಪಾಸ್ಟ್, ಪರೇಡ್, ವ್ರೀತ್ ಲೇಯಿಂಗ್ ಮತ್ತು ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ 11 ಗಂಟೆಗೆ ಆರಂಭವಾಗುವ ಕಾರ್ಯಕ್ರಮಕ್ಕೆ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಹಾಗೂ ಲೇಖಕಿ ಸುಧಾಮೂರ್ತಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.
“ಸಿಂಧೂರ್ ರಕ್ಷಕ ಓಟದ ಉದ್ದೇಶ ನಮ್ಮ ಸಶಸ್ತ್ರ ಪಡೆಗಳು ಹಾಗೂ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದವರಿಗೆ ಗೌರವ ಸಲ್ಲಿಸುವುದು” ಎಂದು ಅವರು ಹೇಳಿದರು.
10 ಕಿ.ಮೀ., 6 ಕಿ.ಮೀ., 3 ಕಿ.ಮೀ. ಓಟಗಳು ಆಯೋಜಿಸಲಾಗಿದೆ. 10 ಕಿ.ಮೀ. ಧ್ವಜಾರೋಹಣಕ್ಕೆ ಮೇಜರ್ ಡಿ.ಪಿ.ಸಿಂಗ್, 6 ಕಿ.ಮೀ. ಓಟಕ್ಕೆ ಅರ್ಜುನ್ ಪ್ರಶಸ್ತಿ ಪುರಸ್ಕೃತ ಕ್ಯಾಪ್ಟನ್ ಭೀಮಸಿಂಗ್, 3 ಕಿ.ಮೀ. ಓಟಕ್ಕೆ ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ರವೀಂದ್ರ ಭಾಗವಹಿಸಲಿದ್ದಾರೆ.
ಪ್ರತಿಭಾಗಿಯವರಿಗೆ ಟೀಶರ್ಟ್, ಪದಕ ಹಾಗೂ ಇ-ಪ್ರಮಾಣ ಪತ್ರ ನೀಡಲಾಗುವುದು. 10 ಕಿ.ಮೀ. ಓಟದಲ್ಲಿ ಪುರುಷ ಮತ್ತು ಮಹಿಳಾ ವಿಭಾಗದ ಮೊತ್ತ ಮೊದಲ ಮೂರು ವಿಜೇತರಿಗೆ ಕ್ರಮವಾಗಿ 10,000 ರೂ., 8,000 ರೂ., 5,000 ರೂ. ಬಹುಮಾನ ಹಾಗೂ ಟ್ರೋಫಿ ನೀಡಲಾಗುವುದು. ಓಟ ಮುಗಿದ ನಂತರ ಉಪಾಹಾರ ಹಾಗೂ ಶಕ್ತಿಯುತ ಪಾನೀಯ ಒದಗಿಸಲಾಗುವುದು.
ಆನ್‌ಲೈನ್ ನೋಂದಣಿ :
ವಿಶೇಷ ವೆಬ್‌ಸೈಟ್ ಮತ್ತು ಲ್ಯಾಂಡಿಂಗ್ ಪೇಜ್ ಮೂಲಕ ಆಗಿದ್ದು, ಓಟ ಶುಲ್ಕ ಪ್ರತಿ ಭಾಗಿಯಾಗುವವರಿಗೆ 200 ರೂ. ನಿರ್ಧರಿಸಲಾಗಿದೆ. ಸುಮಾರು 5,000 ಓಟಗಾರರ ಭಾಗವಹಿಸುವ ನಿರೀಕ್ಷೆಯಿದೆ.
ಕಾರ್ಯಕ್ರಮದಲ್ಲಿ ಅಕಾಡೆಮಿ ಪದಾಧಿಕಾರಿ ರಮೇಶ್ ಪಾಟೀಲ್, ರೋಟರಿ ಕ್ಲಬ್ ಹಾವಶೆಟ್ಟಿ ಪಾಟೀಲ್, ಡಾ. ರಘು ಕೃಷ್ಣಮೂರ್ತಿ, ಡಾ. ಸುವಿನ್ ಪಾಟೀಲ್, ಬಸವಕುಮಾರ್ ಪಾಟೀಲ್ ಖಾಜಾಪುರ್, ಡಾ. ನಾಗೇಶ್ ಪಾಟೀಲ್, ಆದೀಶ್ ವಾಲಿ, ಅನೀಲ್ ಬಿರಾದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







