ಬೀದರ್ | ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸೋಮನಾಥ್ ಪಾಟೀಲ್ ಅವಿರೋಧ ಆಯ್ಕೆ

ಬೀದರ್ : ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸೋಮನಾಥ್ ಪಾಟೀಲ್ ಅವರು ಅವಿರೋಧವಾಗಿ ಪುನರ್ ಆಯ್ಕೆಯಾಗಿದ್ದಾರೆ.
ಇಂದು ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಜಿಲ್ಲಾ ಚುನಾವಣಾ ಅಧಿಕಾರಿಗಳಾಗಿ ಶಿವರಾಜ್ ಗಂದಿಗೆ ಅವರು ಭಾಗವಹಿಸಿ ಅಧ್ಯಕ್ಷರ ನಾಮಪತ್ರ ಸ್ವೀಕರಿಸಿದರು. ನಂತರ ನೂತನ ಜಿಲ್ಲಾಧ್ಯಕ್ಷರಾಗಿ ಸೋಮನಾಥ ಪಾಟೀಲ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಪ್ರಭು ಚೌವ್ಹಾಣ, ಶೈಲೇಂದ್ರ ಬೆಲ್ದಾಳೆ, ಈಶ್ವರ್ ಸಿಂಗ್ ಠಾಕುರ್, ರಾಮಶೇಟ್ಟಿ ಪನಾಳೆ, ರಘುನಾಥ್ ಮಲ್ಕಾಪುರೆ ಹಾಗೂ ಬಾಬು ವಾಲಿ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.
Next Story





