ಬೀದರ್ | ಎಸೆಸೆಲ್ಸಿ ಪರೀಕ್ಷೆ: ಆದಿತ್ಯಗೆ ಶೇ.90.56 ಅಂಕ

ಬೀದರ್ : ಹುಮನಾಬಾದ್ ತಾಲ್ಲೂಕಿನ ಮುಗನೂರ್ ಗ್ರಾಮದ ಬಡ ರೈತನ ಮಗ ಆದಿತ್ಯ ಎಂಬ ವಿದ್ಯಾರ್ಥಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.90.56 ಅಂಕ ಪಡೆದಿದ್ದಾನೆ.
ಕನ್ನಡ 123, ಹಿಂದಿ 100, ಇಂಗ್ಲಿಷ್ 84, ಗಣಿತ 87, ವಿಜ್ಞಾನ 88 ಹಾಗೂ ಸಮಾಜ ವಿಜ್ಞಾನದಲ್ಲಿ 84 ಅಂಕ ಪಡೆಯುವುದರ ಮೂಲಕ ಒಟ್ಟು ಶೇ.90.56 ಅಂಕ ಪಡೆದಿದ್ದು, ಿವರು ಹಳ್ಳಿಖೆಡ್ ಪಟ್ಟಣದ ಮಾತೋಶ್ರೀ ಕಸ್ತೂರಿಬಾಯಿ ತಾಳಂಪಳ್ಳಿ ಪ್ರೌಢ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ.
ನಮಗೆ ಅಕ್ಷರದ ಜ್ಞಾನ ಇಲ್ಲ. ಹೊಲದಲ್ಲಿ ದುಡಿಯುತ್ತೇವೆ. ಆದರೆ ನಾನು ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡುತ್ತಿದ್ದೇನೆ. ನನ್ನ ಮೊದಲ ಮಗಳು 10ನೇ ತರಗತಿಯಲ್ಲಿ ಶೇ.90.88 ಅಂಕ ಪಡೆದುಕೊಂಡಿದ್ದಳು. ನಂತರ ನಮ್ಮ ಎರಡನೇ ಮಗಳು ಶೇ.95.04 ಅಂಕ ಪಡೆದುಕೊಂಡಿದ್ದಳು. ನನ್ನ ಮಗ ಕೂಡ ಶೇ.90.56 ಅಂಕ ಪಡೆದುಕೊಂಡಿರುವುದು ನನಗೆ ತುಂಬಾ ಹೆಮ್ಮೆಯಾಗಿದೆ. ಮನೆಯಲ್ಲಿ ಇಂದು ಸಂತಸದ ವಾತಾವರಣ ಇದೆ ಎಂದು ವಿದ್ಯಾರ್ಥಿಯ ತಂದೆ ಅನಿಲ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
Next Story





