ಬೀದರ್ | ಎಸೆಸೆಲ್ಸಿ ಪರೀಕ್ಷೆ: ವೈಷ್ಣವಿಗೆ ಶೇ.94.72 ಅಂಕ

ಬೀದರ್ : ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಹಳ್ಳಿಖೇಡ್ (ಕೆ) ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ವೈಷ್ಣವಿ ಶೇ.94.72 ಅಂಕಗಳಿಸಿದ್ದು, ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಕನ್ನಡ 117, ಹಿಂದಿ 100, ಇಂಗ್ಲಿಷ್ 97, ಗಣಿತ 94, ವಿಜ್ಞಾನ 90 ಹಾಗೂ ಸಮಾಜ ವಿಜ್ಞಾನ 94 ಅಂಕ ಹೀಗೆ ಒಟ್ಟು 592 ಅಂಕ ಗಳಿಸುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ವೈಷ್ಣವಿ ಹುಲಸೂರ್ ತಾಲ್ಲೂಕಿನ ಮುಚಳಂಬ ಗ್ರಾಮದ ನಿವಾಸಿಯಾದ ಸಂತೋಷ್ ಮತ್ತು ಅರ್ಚನಾ ಅವರ ಪುತ್ರಿ.
ನನ್ನ ಮಗಳು ಒಳ್ಳೆ ಅಂಕ ತೆಗೆದುಕೊಂಡು ಪಾಸಾಗಿದ್ದಾಳೆ ಎಂದು ಹೇಳುತ್ತಿದ್ದಾರೆ, ಆದರೆ ಅದರ ಬಗ್ಗೆ ನನಗೇನು ಗೊತ್ತಾಗಲ್ಲ. ಅವಳು ಡಾಕ್ಟರ್ ಆಗುವ ಕನಸು ಹೊತ್ತಿದ್ದಾಳೆ. ಆಕೆ ಎಷ್ಟು ಓದಿದರೂ ಕೂಡ ನಾವು ಓದಿಸುತ್ತೇವೆ ಎಂದು ವಿದ್ಯಾರ್ಥಿನಿಯ ತಾಯಿ ಅರ್ಚನಾ ಅವರು ತಿಳಿಸಿದ್ದಾರೆ.
Next Story





