ಬೀದರ್ | ಗುರುನಾನಕ್ ಪ್ರಥಮ ದರ್ಜೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಿ.ಎ. ಪರೀಕ್ಷೆಯಲ್ಲಿ ಅಪೂರ್ವ ಸಾಧನೆ

ಬೀದರ್ : ಇಲ್ಲಿನ ನಾನಕ್ ಝಿರಾ ಸಾಹೇಬ್ ಫೌಂಡೇಶನ್ ನ ಅಧಿನದಲ್ಲಿರುವ ಗುರುನಾನಕ್ ಪ್ರಥಮ ದರ್ಜೆ ಮಹಾವಿದ್ಯಾಲಯದ ಬಿ.ಕಾಂ. 4ನೇ ಸೆಮಿಸ್ಟರ್ ನ ವಿದ್ಯಾರ್ಥಿಗಳು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ನಡೆಸಿದ ಚಾರ್ಟರ್ಡ್ ಅಕೌಂಟೆಂಟ್ಸ್ (CA) ಪರೀಕ್ಷೆಯಲ್ಲಿ ಅದ್ಭುತ ಯಶಸ್ಸು ಸಾಧಿಸಿದ್ದಾರೆ.
ವಿದ್ಯಾರ್ಥಿನಿ ಸೃಷ್ಠಿ ಅವರು ಇಂಟರ್ಮಿಡಿಯೇಟ್ ಸಿ.ಎ. ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತಿರ್ಣಳಾಗಿದ್ದು, ಸುದೀಪ್ ನರೋಟೆ, ಕುಮಾರ ಮತ್ತು ಆದಿತ್ಯ ಬಚ್ಚಾ ಅವರು ಫೌಂಡೇಶನ್ ಸಿ.ಎ. ಪರೀಕ್ಷೆ ಉತ್ತಿರ್ಣರಾಗಿ ತಮ್ಮ ಪ್ರತಿಭೆಯನ್ನು ರಾಷ್ಟ್ರಮಟ್ಟದಲ್ಲಿ ಪ್ರದರ್ಶಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲ ಹಾಗೂ ಎಲ್ಲಾ ಸಿಬ್ಬಂದಿ, ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದು, ಮುಂದಿನ ದಿನಗಳಲ್ಲಿ ಈ ಪ್ರತಿಭಾವಂತರಿಗೆ ಇನ್ನಷ್ಟು ಪ್ರಗತಿ, ಯಶಸ್ಸು ಹಾಗೂ ವೃತ್ತಿಜೀವನದಲ್ಲಿ ಉನ್ನತ ಸ್ಥಾನ ಸಿಗಲೆಂದು ಹಾರೈಸಿದ್ದಾರೆ.
Next Story





