ಬೀದರ್ | ಶಸ್ತ್ರಚಿಕಿತ್ಸೆ ವಿಫಲ ; ಸರಕಾರಿ ಆಸ್ಪತ್ರೆ ವೈದ್ಯರ ಅಮಾನತಿಗೆ ಆಗ್ರಹ

ಬೀದರ್ : ನನ್ನ ಬಲಗೈ ಬೆರಳಿನ ಶಸ್ತ್ರಚಿಕಿತ್ಸೆ ವಿಫಲವಾಗಿದ್ದು, ಜಿಲ್ಲಾ ಸರಕಾರಿ ಆಸ್ಪತ್ರೆಯ ವೈದ್ಯರನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ನರಸಿಂಗ್ ಅವರು ಆಗ್ರಹ ಮಾಡಿದ್ದಾರೆ.
ಇಂದು ಅವರು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಪತ್ರದಲ್ಲಿ, ನಾನು ಹುಮನಾಬಾದ್ ತಾಲ್ಲೂಕಿನ ಸಿಂದಬಂದಗಿ ಗ್ರಾಮದ ನಿವಾಸಿಯಾಗಿದ್ದು, ನನ್ನ ಬಲಗೈ ಬೆರಳಿನ ಮೂಳೆ ಮುರಿದ ಕಾರಣ ನ.21 ರಂದು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರ್ಪಡೆಗೊಂಡಿದ್ದೆ. ನ.26 ರಂದು ನನ್ನ ಕೈ ಬೆರಳಿನ ಶಸ್ತ್ರಚಿಕಿತ್ಸೆ ನಡೆದಿತ್ತು. ನ.30 ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಯಲ್ಲಿಯೇ ವಿಶ್ರಾಂತಿ ಪಡೆದಿದ್ದು, ಜ.4 ರಂದು ಮತ್ತೊಮ್ಮೆ ಎಕ್ಸರೆ ತೆಗೆದಿದ್ದಾಗ ನನ್ನ ಕೈ ಬೆರಳಿನ ಮೂಳೆ ಮೊದಲಿನ ಹಾಗೆ ತುಂಡಾಗಿದ್ದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.
ವೈದ್ಯರ ನಿರ್ಲಕ್ಷತನದಿಂದಲೇ ನನ್ನ ಕೈಬೆರಳಿನ ಚಿಕಿತ್ಸೆ ಫಲಕಾರಿಯಾಗಿಲ್ಲ. ವೈದ್ಯರನ್ನು ಅಮಾನತು ಮಾಡುವ ಮೂಲಕ ಅವರ ಮೇಲೆ ಶಿಸ್ತಿನ ಕ್ರಮಕೈಗೊಳ್ಳಬೇಕು. ಹಾಗೆಯೇ ನನ್ನ ಉನ್ನತ ಚಿಕಿತ್ಸೆಗೊಸ್ಕರ ವೈದ್ಯಕೀಯ ವೆಚ್ಚ ಭರಿಸುವಂತೆ ಆ ವೈದ್ಯರಿಗೆ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗುರುದಾಸ್ ಅಮದಾಲಪಾಡ್, ಆನಂದ್ ರೆಡ್ಡಿ, ಗಣೇಶ್ ಹಾಗೂ ಸುನಿಲ್ ಸೇರಿದಂತೆ ಇತರರು ಇದ್ದರು.







