ಬೀದರ್ | ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ : ಭಾರತ ಕಮ್ಯೂನಿಸ್ಟ್ ಪಕ್ಷ ಖಂಡನೆ

ಬೀದರ್ : ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ಖಂಡಿಸಿ ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಮಂಡಳಿಯು ಖಂಡಿಸಿದೆ.
ಇಂದು ಜಿಲ್ಲಾ ಮಂಡಳಿಯ ತುರ್ತು ಸಭೆ ಕರೆದು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ಖಂಡಿಸಲಾಯಿತು. ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಎ.22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ, ಸುಮಾರು 27 ಅಮಾಯಕ ಜನರ ಹತ್ಯೆ ಮಾಡಿದ್ದಾರೆ. ಈ ಘಟನೆಯನ್ನು ಕೋಮು ಗಲಭೆಗೆ ಉಪಯೋಗಿಸದಂತೆ ಭಾರತ ಸರ್ಕಾರ ನಿಗಾ ವಹಿಸಬೇಕು ಎಂದು ಮನವಿ ಮಾಡಲಾಗಿದೆ.
ಈ ಭಯೋತ್ಪಾದಕ ಕೃತ್ಯವನ್ನು ಭಾರತ ಕಮ್ಯೂನಿಸ್ಟ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಹಾಗೆಯೇ ಸಂಸತ್ ಸಭೆಯನ್ನು ಕರೆದು ಸರ್ವ ಸಂಸದರ ಅಭಿಪ್ರಾಯದಂತೆ ಭಯೋತ್ಪಾದಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸಿಪಿಐ ಜಿಲ್ಲಾ ಮಂಡಳಿ ಸದಸ್ಯ ಬಾಬುರಾವ್ ಹೊನ್ನಾ, ಪಾಂಡುರಂಗ್ ಪ್ಯಾಗೆ, ಪ್ರಭು ಹೊಚ್ಚಕನಳ್ಳಿ, ನಜೀರ್ ಅಹ್ಮದ ಚೊಂಡಿ, ಮಹ್ಮದ್ ಖದೀರಸಾಬ್, ಮಿರ್ಜಾಪೂರ್ ಪ್ರಭು ತಗಣಿಕರ್, ಖಮರ್ ಪಟೇಲ್ ರೇಕುಳಗಿ, ಸುನೀಲ್ ವರ್ಮಾ, ಜೈಶೀಲ್, ಭೀಮಣ್ಣಾ ಬಂಡೆ ಹಾಗೂ ರಾಮಣ್ಣ ಅಲ್ಮಾಸಪೂರ್ ಉಪಸ್ಥಿತರಿದ್ದರು.







