ಬೀದರ್ | ಸಾಮರಸ್ಯದ ಸಮಾಜ ನಿರ್ಮಿಸುವ ಜವಾಬ್ದಾರಿ ಯುವಕರ ಮೇಲಿದೆ : ಪ್ರೊ.ಬಿ.ಎಸ್.ಬಿರಾದಾರ್

ಬೀದರ್ : ಆರೋಗ್ಯಕರ, ಸ್ವಸ್ಥ ಹಾಗೂ ಸಾಮರಸ್ಯದ ಸುಂದರ ಸಮಾಜ ಕಟ್ಟುವ ಜವಾಬ್ದಾರಿ ಯುವ ಜನಾಂಗದ ಮೇಲಿದೆ ಎಂದು ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್.ಬಿರಾದಾರ್ ಅವರು ಹೇಳಿದರು.
ಇಂದು ಬೀದರ್ ವಿಶ್ವವಿದ್ಯಾಲಯದ ವತಿಯಿಂದ ಮಳಚಾಪೂರ್ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಯುಗವು ತಾಂತ್ರಿಕ, ವೈಜ್ಞಾನಿಕ ಕೌಶಲ್ಯದ ನಾಗಾಲೋಟದ ವೇಗದಲ್ಲಿ ಸಾಗುತ್ತಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಮಹತ್ವದ ಪಾತ್ರವಹಿಸುತ್ತಿದೆ. ಇದರೊಂದಿಗೆ ಸಾಮರಸ್ಯದ ಸಮಾಜ ಕಟ್ಟಬೇಕಾಗಿದೆ ಎಂದರು.
ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ನಾಗಭೂಷಣ ಕಮಠಾಣೆ ಅವರು ಮಾತನಾಡಿ, ಭಾರತ ಸರ್ಕಾರ ಆರಂಭಿಸಿರುವ ರಾಷ್ಟ್ರೀಯ ಸೇವಾ ಯೋಜನೆಯ ಮುಖಾಂತರ ಯುವಕರು ತಮ್ಮ ಪ್ರತಿಭೆ, ಸಾಮರ್ಥ್ಯ ಅಭಿವ್ಯಕ್ತಿಸಲು ಅವಕಾಶವಿದೆ. ಎಷ್ಟೋ ಸಾಧಕರು ಹಳ್ಳಿಯಿಂದಲೇ ಬಂದವರಾಗಿದ್ದಾರೆ. ನಾವು ಹಳ್ಳಿಯವರರಾಗಿದ್ದು, ಗ್ರಾಮೀಣ ಪರಿಸರದಿಂದ ಬಂದವರು ಎಂಬ ಕೀಳರಿಮೆ ಮರೆತು ಯುವಕರು ಸದೃಢ ಸಮಾಜ ಕಟ್ಟುವಲ್ಲಿ ಮುಂದಾಗಬೇಕಿದೆ ಎಂದು ಹೇಳಿದರು.
ಬೀದರ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾದ ಸುರೇಖಾ ಕೆ.ಎ.ಎಸ್. ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಅಬ್ದುಲ್ ಸತ್ತಾರ ಸಾಬ್, ವೈಷ್ಣವಿ, ಸಚಿನ್ ಶಿವರಾಜ್, ಬೀದರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಪರಮೇಶ್ವರ್ ನಾಯ್ಕ.ಟಿ, ಸಿದ್ಧಾರೂಢ ಮಠದ ಪೀಠಾಧಿಪತಿ ಡಾ.ಸದ್ರೂಪಾನಂದ್ ಭಾರತಿ ಶ್ರೀ, ಹಿರಿಯರಾದ ಶೋಭಾ ಪಾಟೀಲ್, ಮಳಚಾಪೂರ್ ಗ್ರಾಮ ಪಂಚಾಯತ್ ಅಧ್ಯಕ್ಷ ಲಕ್ಷ್ಮೀಬಾಯಿ ಪಾಟೀಲ್, ಉಪಾಧ್ಯಕ್ಷ ಜಗದೇವಿ ರಾಜನಾಳೆ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಸೀತಾ, ಶರಣಪ್ಪ ಲಗಶೆಟ್ಟಿ, ಸರಕಾರಿ ಶಾಲೆಯ ಮುಖ್ಯ ಗುರುಗಳಾದ ಲಕ್ಷ್ಮೀ, ಚಿತ್ರಲೇಖಾ, ಗ್ರಾಮದ ಮುಖಂಡರಾದ ಅಶೋಕ್ ಗುಮ್ಮೆ, ಮಲ್ಲಿಕಾರ್ಜುನ್ ಜ್ಯಾಂತೆ, ವಿಶ್ವನಾಥ್ ಗುಮ್ಮೆ ಹಾಗೂ ಪ್ರಭು ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.







