ಬೀದರ್ | ಕಳ್ಳತನ ಪ್ರಕರಣ : ಆರೋಪಿಗಳಿಗೆ 2 ವರ್ಷ ಜೈಲು ಶಿಕ್ಷೆ, ದಂಡ

ಬೀದರ್ : ಕಳ್ಳತನ ಪ್ರಕರಣದಲ್ಲಿ ಬಂಧನವಾಗಿದ್ದ ಇಬ್ಬರು ಆರೋಪಿಗಳಿಗೆ ಹೆಚ್ಚುವರಿ ಜೆ ಎಂ ಎಫ್ ಸಿ ನ್ಯಾಯಾಧೀಶರಾದ ಅಲ್ತಾಫ್ ಹುಸೇನ್ ಅವರು ಶುಕ್ರವಾರ 2 ವರ್ಷ ಜೈಲು ಶಿಕ್ಷೆ ಹಾಗೂ 11 ಸಾವಿರ ರೂ. ದಂಡ ವಿಧಿಸಿದ್ದಾರೆ.
ಚಿಟಗುಪ್ಪಾದ ನಿವಾಸಿಗಳಾದ ಶಾರೂಕ್ ಅಹ್ಮದ್ ಮಹ್ಮದ್ ಇಸ್ಮಾಯಿಲ್ ಸಿಲ್ದಾರ್ (19) ಹಾಗೂ ಅಕ್ಬರಲಿ (20) ಶಿಕ್ಷೆಗೆ ಒಳಗಾದ ಆರೋಪಿಗಳು.
2023 ರ ಮೇ 6 ರಂದು ಚಿಟಗುಪ್ಪದ ಸರಕಾರಿ ಕನ್ಯಾ ಪೌಢ ಶಾಲೆಯ ಕಚೇರಿಗೆ ಕೀಲಿ ಹಾಕಿಕೊಂಡು ಹೋಗಲಾಗಿತ್ತು. ಆರೋಪಿಗಳು ಅಂದು ರಾತ್ರಿಯಿಂದ ಬೆಳ್ಳಿಗೆ 5 ಗಂಟೆಯ ಅವಧಿಯಲ್ಲಿ ಶಾಲೆ ಕಚೇರಿಯ ಕೀಲಿ ಮುರಿದು ಕಚೇರಿಯಲ್ಲಿದ್ದ 187 ನಂದಿನಿ ಹಾಲಿನ ಪೌಡರ್ ಪಾಕೇಟ್ ಮತ್ತು ಒಂದು ಇಂಡಿಯನ್ ಗ್ಯಾಸ್ ಸಿಲಿಂಡರ್ ಕಳವು ಮಾಡಿಕೊಂಡು ಹೋಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಚಿಟಗುಪ್ಪ ಪೊಲೀಸ್ ಉಪನೀರಿಕ್ಷಕರು ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
Next Story





