ಬೀದರ್ | ಜಿಲ್ಲೆಯಲ್ಲಿ ಬೀಜ, ರಸಗೊಬ್ಬರದ ಕೊರತೆ ಇಲ್ಲ : ಜಂಟಿ ಕೃಷಿ ನಿರ್ದೇಶಕ ಜಿಯಾ ಉಲ್ ಹಕ್

ಬೀದರ್ : ಜಿಲ್ಲೆಯಲ್ಲಿ ಬೀಜ ಹಾಗೂ ರಸಗೊಬ್ಬರದ ಕೊರತೆ ಇಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾ ಉಲ್ ಹಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಮುಂಗಾರು ಬಿತ್ತನೆಗೆ ಬೀಜ, ರಸಗೊಬ್ಬರ ಮಾರಾಟ ಜೋರಾಗಿವುದರಿಂದ ಕೃಷಿ ಇಲಾಖೆಯಿಂದ ಭರದ ಸಿದ್ದತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಸೋಯಾ 2.25 ಸಾವಿರ ಹೆಕ್ಟರ್, ತೊಗರಿ 1.18 ಸಾವಿರ ಹೆಕ್ಟರ್, 20 ಸಾವಿರ ಹೆಕ್ಟರ್ ನಲ್ಲಿ ಉದ್ದು ಬಿತ್ತನೆಯಾಗಲಿದೆ. ಎಲ್ಲಾ 30 ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ಸಂಗ್ರಹಿಸಲಾಗಿದ್ದು, ಅತಿ ಹೆಚ್ಚಾಗಿ ಸೊಯಾ ಬಿತ್ತನೆಗೆ ಗಡಿ ಜಿಲ್ಲೆಯಲ್ಲಿ ರೈತರು ಮುಂದಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 95 ಸಾವಿರ ಕ್ವಿಂಟಲ್ ಬೀಜಗಳ ಸಂಗ್ರಹ ಲಭ್ಯವಿದೆ. 37 ಸಾವಿರ ಕ್ವಿಂಟಲ್ ವಿವಿಧ ರಸಗೊಬ್ಬರ ಬೇಡಿಕೆ ಇರುವುದರಿಂದ ಈಗಾಗಲೇ ಮೂರುವರೆ ಸಾವಿರ ಕ್ವಿಂಟಲ್ ಡಿಎಪಿ, ಯೂರಿಯಾ ಗೊಬ್ಬರದ ಸ್ಟಾಕ್ ಸಾಕಷ್ಟು ಪ್ರಮಾಣದಲ್ಲಿದೆ. ಉಳಿದ ರಸಗೊಬ್ಬರ ಸಮಯಕ್ಕೆ ಸರಿಯಾಗಿ ಜಿಲ್ಲೆಗೆ ಬರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಮಳೆ ಸರಿಯಾದ ಸಮಯಕ್ಕೆ ಬೀಳುತ್ತಿರುವುದರಿಂದ ರೈತರು ಬಿತ್ತನೆಗೆ ಮುಂದಾಗಿದ್ದಾರೆ ಎಂದು ಅವರು ಹೇಳಿದ್ದಾರೆ.