Homnabad : ನಾಯಿ ಕಡಿತಕ್ಕೊಳಗಾಗಿ ನಾಲ್ಕು ತಿಂಗಳ ಮಗು ಮೃತ್ಯು

ಸಾಂದರ್ಭಿಕ ಚಿತ್ರ Photo: magnific
ಬೀದರ್ : ನಾಯಿ ಕಡಿತಕ್ಕೆ ಒಳಗಾಗಿ ನಾಲ್ಕು ತಿಂಗಳ ಮಗು ಮೃತಪಟ್ಟ ಘಟನೆ ಹುಮನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ಶನಿವಾರ ನಸುಕಿನ ಜಾವದಲ್ಲಿ ನಡೆದಿದೆ.
ದುಬಲಗುಂಡಿ ಗ್ರಾಮದ ಸುಧಾರಾಣಿ ಹಾಗೂ ಸಿದ್ದು ದಂಪತಿಯ 3 ತಿಂಗಳ ಹೆಣ್ಣುಮಗು ಶಿವಾನಿ ನಾಯಿ ಕಡಿತದಿಂದ ಮೃತಪಟ್ಟ ಮಗು. ಇನ್ನೊಂದು ಗಂಡು ಮಗು ಪ್ರದೀಪ್ ಗೆ ಗಾಯಗಳಾಗಿವೆ.
ಶನಿವಾರ ನಸುಕಿನ ಜಾವ ಸುಮಾರು 4 ರಿಂದ 5ಗಂಟೆಗೆ ಮನೆಗೆ ನುಗ್ಗಿದ ನಾಯಿಯೊಂದು ಮಲಗಿದ್ದ 3ತಿಂಗಳ ಕಂದಮ್ಮನ ಮೇಲೆ ದಾಳಿ ನಡೆಸಿದೆ. ನಾಯಿ ಕಡಿತದಿಂದ ಗಂಭೀರವಾಗಿ ಗಾಯಗೊಂಡ ಮಗುವಿಗೆ ಸ್ಥಳೀಯ ದುಬಲಗುಂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ಅಲ್ಲಿಂದ ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಬೀದರ್ ನ ಬ್ರಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ. ಗಾಯಗೊಂಡ ಪ್ರದೀಪ್ ಗೆ ಹುಮನಾಬಾದ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
Next Story




