ಬೀದರ್ | ನೆಮ್ಮದಿಯಿಂದ ಜೀವನ ಸಾಗಬೇಕಾದರೆ ಬುದ್ದರ ಜೀವನ ಚರಿತ್ರೆ ಅರಿಯಬೇಕು : ಲಕ್ಷ್ಮೀಬಾಯಿ ಈಶ್ವರ್

ಬೀದರ್ : ನೆಮ್ಮದಿಯಿಂದ ಜೀವನ ಸಾಗಬೇಕಾದರೆ ಎಲ್ಲರೂ ಬುದ್ದರ ಜೀವನ ಚರಿತ್ರೆ ಅರಿಯಬೇಕು ಎಂದು ಲಕ್ಷ್ಮೀಬಾಯಿ ಈಶ್ವರ್ ಅವರು ಹೇಳಿದರು.
ಇಂದು ಬಕಚೌಡಿ ಗ್ರಾಮದಲ್ಲಿ ಬುದ್ಧರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಬುದ್ಧರ ಸಂದೇಶ ಎಲ್ಲರಿಗೂ ತಲುಪಬೇಕು. ಎಲ್ಲರೂ ಸುಖ ಶಾಂತಿ ನೆಮ್ಮದಿಯಿಂದ ಜೀವನ ಸಾಗಿಸಬೇಕು ಎಂದು ತಿಳಿಸಿದರು.
ಯುವ ಮುಖಂಡ ಸುಂದರ ಭಾವಿಕಟ್ಟಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಆಣದೂರಿನ ಭಂತೆ ಜ್ಞಾನಸಾಗರ ಅವರು ಬುದ್ಧರ ಮೂರ್ತಿ ಅನಾವರಣಗೊಳಿಸಿದರು. ಗ್ರಾಮ ಪಂಚಾಯತ್ ಸದಸ್ಯ ವಿಜಯಕುಮಾರ್ ಭಾವಿಕಟ್ಟಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ರೆಡ್ಡಿ, ಆನಂದ್ ಕೋಳಾರ್, ಭೀಮ್ಮಣ್ಣಾ ಸಂಗಮ್, ಪರಮೇಶ್ವರ್ ಗುಬ್ಬಿ, ಸಂಜು ಗುಬ್ಬಿ, ರಾಹುಲ್ ಸಂಗಮ್, ಸೋಪಾನ್ ಕಾಂಬಳೆ, ಪ್ರಕಾಶ್ ಭಾವಿಕಟ್ಟಿ ಹಾಗೂ ಶಿವಕುಮಾರ ಭಾವಿಕಟ್ಟಿ ಉಪಸ್ಥಿತರಿದ್ದರು.
Next Story





