ಬೀದರ್ | ನಕಲಿ ಪಾನ್ ಮಸಾಲಾ ಸಾಗಾಟ : ಓರ್ವನ ಬಂಧನ

ಬೀದರ್ : ಹೈದರಾಬಾದ್ ನಿಂದ ನಕಲಿ ಪಾನ್ ಮಸಾಲಾ ಸಾಗಾಟ ಮಾಡುತಿದ್ದ ವ್ಯಕ್ತಿಯೊರ್ವನನ್ನು ನಗರದ ಚಿಕಪೇಟ್ ಹತ್ತಿರ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾನುವಾರ ಆರ್‌ಕೆ ಪಾನ್ ಮಸಾಲಾ ಕಂಪನಿಯ ಮಾಲಕ ಸುನೀಲ್ ಸಿಂಗ್ ಅವರು, ತಮ್ಮ ಕಂಪನಿ ಸರ್ಕಾರದಿಂದ ಸಾಗರ ಪಾನ್ ಮಸಾಲಾ, ಎಸ್.ಆರ್-1 ಸುಗಂಧಿತ ಜರ್ದಾ (ತಂಬಾಕು) ಪೌಚ್ ತಯಾರಿಸಲು ಅನುಮತಿ ಪಡೆದಿದೆ. ಆದರೆ ಚಿಕಪೇಟ್ ಕ್ರಾಸ್ ಹತ್ತಿರ ನಮ್ಮ ಕಂಪನಿ ಹೆಸರಿನಲ್ಲಿ ನಕಲಿ ಸುಗಂಧಿತ ಜರ್ದಾ ಪೌಚ್ ಪ್ಯಾಕೇಟ್ ಸಾರ್ವಜನಿಕರಿಗೆ ಮಾರಾಟ ಹಾಗೂ ಅಕ್ರಮ ಸಾಗಣಿಕೆ ಮಾಡಲಾಗುತ್ತಿದೆ ಎಂದು ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿದ್ದರು.
ದೂರನ್ನು ದಾಖಲಿಸಿಕೊಂಡ ಪೊಲೀಸರು ಎಸ್.ಆರ್-1 ಸುಗಂಧಿತ ಜರ್ದಾದ ನಕಲಿ ಪ್ಯಾಕೇಟ್‌ಗಳು ಹೈದರಾಬಾದ್ ನಿಂದ ಅಕ್ರಮ ಸಾಗಾಟ ಮಾಡಿ, ನಗರದ ಚಿಕಪೇಟ್ ಕ್ರಾಸ್ ಹತ್ತಿರ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊರ್ವನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಬಂಧಿತ ವ್ಯಕ್ತಿಯಿಂದ 4,76,000 ರೂ. ಮೌಲ್ಯದ 130 ಪ್ಯಾಕೇಟ್ ನಕಲಿ ಜರ್ದಾ ತಂಬಾಕು ಹಾಗೂ 5,50,000 ರೂ. ಮೌಲ್ಯದ ಕೃತ್ಯಕ್ಕೆ ಬಳಸಿದ ಟೆಂಪೋ ಸ್ಟಾಂಗ್ ವಾಹನ ಹೀಗೆ ಒಟ್ಟು 10,26,000 ರೂ. ಮೌಲ್ಯದ ಮುದ್ದೆ ಮಾಲು ಜಪ್ತಿ ಮಾಡಿ 6 ಜನರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಒರ್ವ ಆರೋಪಿಯನ್ನು ನ್ಯಾಯಾಂಗ ಬಂದನಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.







