ಬೀದರ್ | ಆರ್ಥಿಕ ಅಭಿವೃದ್ದಿ ಸುಸ್ಥಿರತೆ ಕುರಿತು ತರಬೇತಿ; ಹೆಸರು ನೋಂದಣಿಗೆ ಸೂಚನೆ

ಬೀದರ್ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತ, ಪಶುಪಾಲಕರಿಗಾಗಿ ಜು.15 ರಿಂದ 18 ರವರೆಗೆ ಆರ್ಥಿಕ ಅಭಿವೃದ್ದಿ ಸುಸ್ಥಿರತೆ ಕುರಿತು ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆಸಕ್ತರು ಹೆಸರು ನೋಂದಣಿ ಮಾಡಿಕೊಳ್ಳಬಹುದು ಎಂದು ಪಶುವೈದ್ಯಕೀಯ ಮಹಾವಿದ್ಯಾಲಯದ ಆಡಳಿತಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀದರ್‌ನ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ವೈಜ್ಞಾನಿಕ ಪಶುಪಾಲನೆಯಿಂದ ಆರ್ಥಿಕ ಅಭಿವೃದ್ದಿ ಮತ್ತು ಸುಸ್ಥಿರತೆ ಕುರಿತು ನಾಲ್ಕು ದಿನಗಳ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಬೆಂಗಳೂರು ಇವರು ಪ್ರಾಯೋಜಿಸಿರುವ ತರಬೇತಿಯಲ್ಲಿ ಕೇವಲ 30 ರೈತರಿಗೆ ಅವಕಾಶವಿದ್ದು, ಆಸಕ್ತ ರೈತ ಮತ್ತು ಪಶುಪಾಲಕರು ಜು.7 ರ ಒಳಗಾಗಿ ಮೊಬೈಲ್ ಸಂಖ್ಯೆ: 80232 81592 ಅಥವಾ 74114 79651 ಗೆ ಸಂಪರ್ಕಿಸಿ ಹೆಸರು ನೋಂದಾಯಿಸಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ.
ಮೊದಲು ನೋಂದಾಯಿಸಿದ ರೈತರಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಯಶಸ್ವಿಯಾಗಿ ತರಬೇತಿಯನ್ನು ಪೂರ್ಣಗೊಳಿಸುವ ಶಿಬಿರಾರ್ಥಿ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.





