Bidar | ಕಾರಿಗೆ ಢಿಕ್ಕಿ ಹೊಡೆದು ಕಾಲುವೆಗಿಳಿದ ಸಾರಿಗೆ ಬಸ್ : ಹಲವರಿಗೆ ಗಾಯ

ಬೀದರ್: ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಕಾರಂಜಾ ಕಾಲುವೆಗೆ ಜಾರಿಬಿದ್ದ ಪರಿಣಾಮ 7–8 ಮಂದಿ ಗಾಯಗೊಂಡ ಘಟನೆ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಸಮೀಪದ ಕಣಜಿ ಕ್ರಾಸ್‌ನಲ್ಲಿ ಸೋಮವಾರ ನಡೆದಿದೆ.
ಕಾರು ಕಣಜಿ ಗ್ರಾಮದ ಕಡೆಯಿಂದ ಹುಮನಾಬಾದ್–ಬೀದರ್ ರಸ್ತೆಯತ್ತ ತೆರಳುತ್ತಿತ್ತು. ಇದೇ ವೇಳೆ ಹುಮನಾಬಾದ್ ಕಡೆಯಿಂದ ಬೀದರ್ ಕಡೆಗೆ ಬರುತ್ತಿದ್ದ ಸಾರಿಗೆ ಬಸ್ ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಬಸ್‌ನ್ನು ರಸ್ತೆ ಬದಿಯ ಕಾರಂಜಾ ಕಾಲುವೆಯತ್ತ ತಿರುಗಿಸಿದ್ದಾರೆ ಎನ್ನಲಾಗಿದೆ. ಪರಿಣಾಮ ಬಸ್ ಕಾಲುವೆಗೆ ಜಾರಿಬಿದ್ದಿದೆ.
ಘಟನೆಯಲ್ಲಿ 7–8 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಬೀದರ್‌ನ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಘಟನೆ ಧನ್ನೂರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.
Next Story




