ಬೀದರ್: ಎರಡು ಬೈಕ್‌ಗಳು ಮುಖಾಮುಖಿ ಢಿಕ್ಕಿ; ಓರ್ವ ಮೃತ್ಯು

ಬೀದರ್ : ಎರಡು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿ ಒಬ್ಬ ಯುವಕ ಮೃತಪಟ್ಟಿದ್ದು, ಇನ್ನೊಬ್ಬ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಭಾಲ್ಕಿ ತಾಲ್ಲೂಕಿನ ಬಸವನಗರದ ಹತ್ತಿರ ನಡೆದಿದೆ.
ಕುಂಟೆಸಿರ್ಸಿ ಗ್ರಾಮದ ನಿವಾಸಿ ಮಹೇಶ್ (22) ಮೃತಪಟ್ಟ ಯುವಕನಾಗಿದ್ದು, ನಾವದಗಿ ಗ್ರಾಮದ ನಿವಾಸಿ ವಿವೇಕಾನಂದ (36) ಗಾಯಗೊಂಡ ವ್ಯಕ್ತಿಯಾಗಿದ್ದಾನೆ.
ಶನಿವಾರ ರಾತ್ರಿ ಸುಮಾರು 9 ಗಂಟೆಗೆ ಮಹೇಶ್ ಭಾಲ್ಕಿಯಿಂದ ತನ್ನ ಗ್ರಾಮವಾದ ಕುಂಟೆಸಿರ್ಸಿಗೆ ತೆರಳುತಿದ್ದ. ವಿವೇಕಾನಂದ ಎಂಬಾತ ಎದುರಿನಿಂದ ಬರುತ್ತಿದ್ದನು. ಈ ಸಮಯದಲ್ಲಿ ಎರಡು ಬೈಕ್ ಗಳು ಮುಖಾಮುಖಿ ಢಿಕ್ಕಿಯಾಗಿವೆ. ಮಹೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಗಾಯಗೊಂಡಿದ್ದ ವಿವೇಕಾನಂದನನ್ನು ಬೀದರ್‌ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





