Bidar | ಟಿಪ್ಪರ್-ಬೈಕ್ ನಡುವೆ ಢಿಕ್ಕಿ : ಇಬ್ಬರು ಯುವಕರು ಮೃತ್ಯು

ಬೀದರ್ : ಟಿಪ್ಪರ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿ ಇಬ್ಬರು ಯುವಕರು ಮೃತಪಟ್ಟ ಘಟನೆ ರುದನೂರು ಮತ್ತು ಗರ್ಮಾ ತಾಂಡಾದ ನಡುವೆ ಗುರುವಾರ ಬೆಳಗ್ಗೆ ಸಂಭವಿಸಿದೆ.
ಗರ್ಮಾ ತಾಂಡಾದ ನಿವಾಸಿಗಳಾದ ಆಕಾಶ್ (28) ಹಾಗೂ ಮಾರುತಿ (32) ಮೃತಪಟ್ಟ ಯುವಕರಾಗಿದ್ದಾರೆ.
ಇವರಿಬ್ಬರು ಬೈಕಿನಲ್ಲಿ ಕೆಲಸಕ್ಕೆಂದು ಬೀದರ್ ಕಡೆಗೆ ತೆರಳುತ್ತಿದ್ದ ವೇಳೆ ರುದನೂರು ಮತ್ತು ಗರ್ಮಾ ತಾಂಡಾದ ನಡುವೆ ಎದುರಿನಿಂದ ಬಂದ ಟಿಪ್ಪರ್ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಆಕಾಶ್ ಮತ್ತು ಮಾರುತಿಯನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಯು ಧನ್ನೂರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.
Next Story




