ಬೀದರ್ | ಸಮವಸ್ತ್ರವು ವ್ಯಕ್ತಿಯ ವ್ಯಕ್ತಿತ್ವ, ಶಿಸ್ತನ್ನು ಪ್ರತಿಬಿಂಬಿಸುತ್ತದೆ : ಡಿವೈಎಸ್ಪಿ ಶಿವನಗೌಡ ಪಾಟೀಲ್

ಬೀದರ್ : ಸಮವಸ್ತ್ರವು ವ್ಯಕ್ತಿಯ ವ್ಯಕ್ತಿತ್ವ ಮತ್ತು ಶಿಸ್ತನ್ನು ಪ್ರತಿಬಿಂಬಿಸುತ್ತದೆ ಎಂದು ಡಿವೈಎಸ್ಪಿ ಶಿವನಗೌಡ ಪಾಟೀಲ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ನಗರದ ವಿದ್ಯಾರಣ್ಯ ಪ್ರೌಢ ಶಾಲೆಯಲ್ಲಿ ಸಮವಸ್ತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶಾಲೆಯ ವಿದ್ಯಾರ್ಥಿಗಳ ಸಮವಸ್ತ್ರದ ಜೊತೆ ಶಿಸ್ತನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿ ಅವರು ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಪ್ರೊ.ಎಸ್.ಬಿ. ಸಜ್ಜನಶೆಟ್ಟಿ ಅವರು ಮಾತನಾಡಿ, ಸಮವಸ್ತ್ರವು ಜೀವನದ ಶಿಸ್ತನ್ನು ಪಾಲಿಸುತ್ತಾ, ಗುರಿಯ ಸಮೀಪದ ಕಡೆಗೆ ಒಯ್ಯುತ್ತದೆ. ಸಮವಸ್ತ್ರದಿಂದ ಮೇಲು ಕೀಳು, ಮೇಲ್ವರ್ಗ ಕೆಳವರ್ಗ ಎಂಬ ಭೇದಭಾವ ತೊಲಗುತ್ತದೆ. ಶಿಕ್ಷಣ, ಸಂಸ್ಕಾರ, ಕೌಶಲ್ಯಗಳಿಂದ ಮಾತ್ರ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣ ಸಾಧ್ಯ. ನಮ್ಮ ಶಾಲೆಯಲ್ಲಿ ಪ್ರಾರ್ಥನೆ, ಶಿಸ್ತು ಮತ್ತು ಏಕಾಗ್ರತೆ ಕೂಡ ಶಿಕ್ಷಣದ ಒಂದು ಭಾಗವಾಗಿದೆ. ಮಕ್ಕಳು ಸಮಾಜಕ್ಕೆ ಆಸ್ತಿಯಾಗಬೇಕು. ಹಿರಿಯ ವಿದ್ಯಾರ್ಥಿಗಳಿಂದ ಪ್ರೇರಣೆ ಪಡೆದು ಎತ್ತರಕ್ಕೆ ಬೆಳೆಯಬೇಕು ಎಂದು ಹುರಿದುಂಬಿಸಿದರು.
ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳಾದ ದಿಪ್ತಿ ಕುಲಕರ್ಣಿ, ಪ್ರಕಾಶ ಮೇರಂಪುರೆ, ಮುಖ್ಯಗುರು ಪ್ರತಿಭಾ ಚಾಮಾ, ರಿತೀಕಾ, ರೇವಣಪ್ಪಾ, ಪುನಿತ, ಸಿದ್ಧರಾಮ, ಆದಿತ್ಯ, ಅನಿಲಕುಮಾರ, ಸುಪ್ರಿಯಾ ಹಾಗೂ ಸಂಜುಕುಮಾರ ಸೇರಿದಂತೆ ಶಾಲೆಯ ಶಿಕ್ಷಕ/ಕಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





