ಬೀದರ್ | ಅಪರಿಚಿತ ವ್ಯಕ್ತಿ ಮೃತ್ಯು : ವಾರಸುದಾರರ ಪತ್ತೆಗಾಗಿ ಮನವಿ

ಬೀದರ್ : ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಅವರ ವಾರಸುದಾರರು ಯಾರೆಂದು ಪತ್ತೆಯಾಗಿರುವುದಿಲ್ಲ. ಯಾರಿಗಾದರೂ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ತಿಳಿಸಬೇಕು ಎಂದು ಜನವಾಡಾ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆ ಮೂಲಕ ಕೋರಿದ್ದಾರೆ.
ಮೃತ ವ್ಯಕ್ತಿಯು 50 ರಿಂದ 55 ವರ್ಷದವರಾಗಿದ್ದಾರೆ. ಏ.5ರ, 2025 ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈವರೆಗೆ ಈ ಮೃತ ವ್ಯಕ್ತಿಯ ವಾರಸುದಾರರು ಯಾರೆಂದು ಪತ್ತೆಯಾಗಲಿಲ್ಲ. ಬೀದರ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ನೀಡಿದ ದೂರಿನ ಮೇರೆಗೆ ಯು.ಡಿ.ಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೃತ ವ್ಯಕ್ತಿಯು 5.4 ಅಡಿ ಎತ್ತರ ಇದ್ದು, ನೋಡಲು ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಮೈ ಮೇಲೆ ಒಂದು ಬಿಳಿ ಬಣ್ಣದ ಚಕ್ಸ್ ಶರ್ಟ್, ಒಂದು ಕಪ್ಪು ಬಣ್ಣದ ಪ್ಯಾಂಟ್ ಒಂದು ಮೆಹಂದಿ ಬಣ್ಣದ ಅಂಡರವಿಯರ್ ಧರಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮೃತ ವ್ಯಕ್ತಿಯ ವಾರಸುದಾರರು ಯಾರಾದರೂ ಪತ್ತೆಯಾದಲ್ಲಿ ಜನವಾಡಾ ಪೊಲೀಸ್ ಠಾಣೆಯ ಮೊಬೈಲ್ ಸಂಖ್ಯೆ: 94808 03450, ಬೀದರ ಗ್ರಾಮೀಣ ವೃತ್ತದ ಸಿಪಿಐ ಅವರ ಮೊಬೈಲ್ ಸಂಖ್ಯೆ: 94808 03439, ಬೀದರ್ ಡಿಎಸ್‌ಪಿ ಅವರ ಮೊಬೈಲ್ ಸಂಖ್ಯೆ: 94808 03420, ಕಂಟ್ರೋಲ್ ರೂಮ್ ನಂಬರ್ 08482-226700 ಗೆ ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.







