Bidar | ಅಪರಿಚಿತ ವ್ಯಕ್ತಿ ಮೃತ್ಯು : ವಾರಸುದಾರರ ಪತ್ತೆಗಾಗಿ ಮನವಿ

ಸಾಂದರ್ಭಿಕ ಚಿತ್ರ
ಬೀದರ್ : ಹುಮನಾಬಾದ್ ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಮೇ 3ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ 55 ರಿಂದ 60 ವರ್ಷ ವಯಸ್ಸಿನ ಭಿಕ್ಷುಕನ ವೇಷದಲ್ಲಿದ್ದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಆದರೆ ಈವರೆಗೆ ಮೃತನ ವಾರಸುದಾರರು ಪತ್ತೆಯಾಗಿಲ್ಲ ಎಂದು ಹುಮನಾಬಾದ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೃತ ವ್ಯಕ್ತಿಯು ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಸುಮಾರು 5 ಅಡಿ 2 ಇಂಚು ಎತ್ತರ ಹೊಂದಿದ್ದು, ದುಂಡನೆಯ ಮುಖ, ಕಪ್ಪು-ಬಿಳಿ ಮಿಶ್ರಿತ ಕೂದಲು, ಕಪ್ಪು-ಬಿಳಿ ಮಿಶ್ರಿತ ಮೀಸೆ ಹಾಗೂ ಗಡ್ಡ ಹೊಂದಿದ್ದಾನೆ ಎಂದು ವಿವರಿಸಲಾಗಿದೆ.
ಹುಮನಾಬಾದ್ ನಿವಾಸಿ ಸೈಯದ್ ಗೌಸ್ ಅಹಮ್ಮದ್ ನೀಡಿದ ಲಿಖಿತ ದೂರಿನ ಮೇರೆಗೆ ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ. 09/2026, ಕಲಂ 194 ಬಿಎನ್ಎಸ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಮೃತದೇಹವನ್ನು ಹುಮನಾಬಾದ್ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿಯ ಕುರಿತು ಯಾವುದೇ ಮಾಹಿತಿ ಅಥವಾ ಸುಳಿವು ಸಿಕ್ಕಲ್ಲಿ ಹುಮನಾಬಾದ್ ಪೊಲೀಸ್ ಉಪಾಧೀಕ್ಷಕರ ಮೊಬೈಲ್ 94808 03422, ಪೊಲೀಸ್ ನಿರೀಕ್ಷಕರ ಮೊಬೈಲ್ 94808 03435, ಪೊಲೀಸ್ ಉಪನಿರೀಕ್ಷಕರ ಮೊಬೈಲ್ 94808 03452 ಅಥವಾ ಪೊಲೀಸ್ ಠಾಣೆ ದೂರವಾಣಿ 08483-270033 ಗೆ ಸಂಪರ್ಕಿಸುವಂತೆ ಕೋರಲಾಗಿದೆ.






