ಬೀದರ್ | ಸಿಂಧನಕೇರಾ ಗ್ರಾಮದ ರಸ್ತೆ ದುರಸ್ಥಿಗೆ ಗ್ರಾಮಸ್ಥರಿಂದ ಒತ್ತಾಯ

ಬೀದರ್ : ಹುಮನಾಬಾದ್ ತಾಲೂಕಿನ ಸಿಂಧನಕೇರಾ ಗ್ರಾಮಕ್ಕೆ ಹೋಗುವ ರಸ್ತೆಯು ಮಳೆಯಿಂದಾಗಿ ಕೆಟ್ಟು ಹೋಗಿದ್ದು, ಕೂಡಲೇ ರಸ್ತೆ ದುರುಸ್ಥಿ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಒಂದು ವರ್ಷದಿಂದ ರಸ್ತೆ ಸ್ವಲ್ಪ ಹಾಳಾಗಿತ್ತು. ಯಾವ ಅಧಿಕಾರಿಗಳು ನಮ್ಮ ಊರು ಕಡೆಗೆ ಗಮನ ಹರಿಸಲಿಲ್ಲ. ಇದೀಗ ಮಳೆಯಿಂದಾಗಿ ಊರಿಗೆ ಹೋಗುವ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು, ಪ್ರಯಾಣ ಮಾಡಲು ತುಂಬಾ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥ ಯುವರಾಜ್ ಅವರು ತಿಳಿಸಿದ್ದಾರೆ.
ಹುಮನಾಬಾದ್ ತಾಲೂಕಿನ ಜನಪ್ರತಿನಿಧಿ, ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಸಂಸದರು ಇತ್ತಕಡೆಗೆ ಗಮನ ಹರಿಸಿ ಸಿಂಧನಕೇರಾ ಕ್ರಾಸ್ ನಿಂದ ಸಿಂಧನಕೇರಾ ಗ್ರಾಮದ ವರೆಗೆ ರಸ್ತೆಯು ನಿರ್ಮಾಣ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
Next Story





