ಬೀದರ್ | ನಿರಂತರ ಮಳೆಯಿಂದ ಅಂಬೇಡ್ಕರ್ ಭವನದ ಗೋಡೆ ಕುಸಿತ : ತಪ್ಪಿದ ಭಾರಿ ಅನಾಹುತ

ಬೀದರ್ : ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹುಮನಾಬಾದ್ ತಾಲ್ಲೂಕಿನ ಸುಲ್ತಾನಬಾದ್ ವಾಡಿ ಗ್ರಾಮದ ಅಂಬೇಡ್ಕರ್ ಭವನದ ಗೋಡೆ ಕುಸಿದಿದ್ದು, ಭಾರಿ ಅನಾಹುತ ತಪ್ಪಿದೆ.
ಜಿಲ್ಲೆಯಲ್ಲಿ 3-4 ದಿವಸದಿಂದ ಮಳೆ ಸುರಿಯುತ್ತಿದ್ದು, ಸುಲ್ತಾನಬಾದ್ ವಾಡಿ ಗ್ರಾಮದ ಅಂಬೇಡ್ಕರ್ ಭವನ ಸುಮಾರು 45 ವರ್ಷದ ಹಳೆಯದಾಗಿದ್ದು, ಮಳೆಯಿಂದ ಭವನದ ಗೋಡೆ ಸಂಪೂರ್ಣವಾಗಿ ನೆನೆದಿತ್ತು. ಇದರಿಂದಾಗಿ ಸೋಮವಾರ ರಾತ್ರಿ ಕುಸಿದು ಬಿದ್ದಿದೆ ಎಂದು ತಿಳಿದು ಬಂದಿದೆ.
ಅಂಬೇಡ್ಕರ್ ಭವನದ ಹತ್ತಿರ ಸದಾ ಜನ ಜಂಗೂಳಿ ಇರುತಿತ್ತು. ಹಗಲಿನ ಸಮಯದಲ್ಲಿ ಆ ಗೋಡೆಯ ಪಕ್ಕದಲ್ಲಿ ಮಕ್ಕಳು ಆಟವಾಡುತ್ತಿದ್ದರು. ಆದರೆ ಭವನದ ಗೋಡೆ ರಾತ್ರಿ ಸಮಯದಲ್ಲಿ ಕುಸಿದಿದ್ದರಿಂದ ಯಾವುದೇ ರೀತಿಯ ಅನಾಹುತವಾಗಲಿಲ್ಲ ಎಂದು ಅಲ್ಲಿನ ಗ್ರಾಮಸ್ಥರು ತಿಳಿಸಿದ್ದಾರೆ.
Next Story





