Bidar | ಇಬ್ಬರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ; ಪತ್ತೆಗಾಗಿ ಮನವಿ

ಬೀದರ್: ನಗರದ ಫತ್ತೆ ದರ್ವಾಜಾ ಸಮೀಪದ ಪನ್ಸಾಲ್ ತಾಲೀಮ್ ಬಡಾವಣೆಯ ಮಹಿಳೆಯೊಬ್ಬರು ತಮ್ಮ ಇಬ್ಬರು ಮಕ್ಕಳೊಂದಿಗೆ ಜುಲೈ 16ರಿಂದ ಕಾಣೆಯಾಗಿದ್ದು, ಅವರ ಬಗ್ಗೆ ಮಾಹಿತಿ ದೊರೆತಲ್ಲಿ ತಕ್ಷಣ ಪೊಲೀಸರಿಗೆ ತಿಳಿಸುವಂತೆ ಉಪನಗರ ಪೊಲೀಸ್ ಠಾಣೆ ಪಿಎಸ್‌ಐ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಕಾಣೆಯಾದವರು ಪನ್ಸಾಲ್ ತಾಲೀಮ್ ಬಡಾವಣೆಯ ನಿವಾಸಿ ಸೀಮಾ ಶೀರಿನ್ (27) ಹಾಗೂ ಅವರ ಮಕ್ಕಳಾದ ಅಬುಬಕರ (7) ಮತ್ತು ಫಾತಿಮಾ (4).
ಈ ಸಂಬಂಧ ಸೀಮಾ ಶೀರಿನ್ ಅವರ ಪತಿ ಮಹ್ಮದ್ ಗೌಸ್ ದೂರು ದಾಖಲಿಸಿದ್ದು, ಜುಲೈ 16ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಪತ್ನಿ ಮಕ್ಕಳೊಂದಿಗೆ ತರಕಾರಿ ತರಲು ಹೋಗಿದ್ದು, ಬಳಿಕ ಮನೆಗೆ ವಾಪಸ್ಸಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸಂಬಂಧಿಕರು ಸೇರಿದಂತೆ ವಿವಿಧೆಡೆ ಹುಡುಕಿದರೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ.
ಸೀಮಾ ಶೀರಿನ್ ಅವರ ಚಹರೆ:
5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ, ಕಪ್ಪು ಕೂದಲು, ದುಂಡು ಮುಖ, ನೇರ ಮೂಗು ಹೊಂದಿದ್ದು, ಕ್ರೀಮ್ ಬಣ್ಣದ ಮಿಶ್ರ ಪ್ರಿಂಟೆಡ್ ಶರ್ಟ್ ಹಾಗೂ ಸಲ್ವಾರ್ ಧರಿಸಿರುತ್ತಾರೆ. ಉರ್ದು ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ.
ಅಬೂಬಕ್ಕರ್ (7) ಚಹರೆ:
ಸುಮಾರು 3 ಅಡಿ 5 ಇಂಚು ಎತ್ತರ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ, ಕಪ್ಪು ಕೂದಲು, ದುಂಡು ಮುಖ, ನೇರ ಮೂಗು ಹೊಂದಿದ್ದಾನೆ. ನೀಲಿ ಟಿ-ಶರ್ಟ್ ಹಾಗೂ ಬೂದು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಉರ್ದು ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆ.
ಫಾತಿಮಾ (4) ಚಹರೆ:
ಸುಮಾರು 2 ಅಡಿ 5 ಇಂಚು ಎತ್ತರ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ, ಕಪ್ಪು ಕೂದಲು, ದುಂಡು ಮುಖ, ನೇರ ಮೂಗು ಹೊಂದಿದ್ದಾಳೆ. ಬಿಳಿ ಶರ್ಟ್ ಹಾಗೂ ಕೆಂಪು ಬಣ್ಣದ ಲೆಗ್ಗಿನ್ಸ್ ಧರಿಸಿದ್ದಾಳೆ. ಉರ್ದು ಮತ್ತು ಹಿಂದಿ ಭಾಷೆ ಮಾತನಾಡುತ್ತಾಳೆ.
ತಾಯಿ ಹಾಗೂ ಇಬ್ಬರು ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಇವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಬೀದರ್ ಉಪನಗರ ಪೊಲೀಸ್ ಠಾಣೆಯ ಪಿಎಸ್‌ಐ (ಮೊ. 94808 03445) ಅವರನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.






