ಬೀದರ್ | ಯುವತಿ ಕಾಣೆ : ಪತ್ತೆಗಾಗಿ ಮನವಿ

ಬೀದರ್ : ನಗರದ ದೀನ ದಯಾಳ ಬಡಾವಣೆಯ ನಿವಾಸಿಯೊಬ್ಬಳು ಕಾಣೆಯಾಗಿದ್ದು, ಈ ಯುವತಿಯ ಬಗ್ಗೆ ಮಾಹಿತಿ ಸಿಕ್ಕರೆ ತಿಳಿಸಬೇಕು ಎಂದು ಮಾರ್ಕೆಟ್ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿವಾನಿ (19) ಕಾಣೆಯಾದ ಮಹಿಳೆಯಾಗಿದ್ದು, ಜು.10 ರಂದು ಮನೆಯಿಂದ ಹೊರಗಡೆ ಹೋಗಿ ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾಳೆ. ಕಾಣೆಯಾದ ಮಹಿಳೆಗೆ ತೆಳ್ಳನೆ ಮುಖವಿದ್ದು, ಕಪ್ಪು ಗೋಧಿ ಬಣ್ಣ, ಹಲ್ಲುಗಳು ಸ್ವಲ್ಪ ಮುಂದೆ, ತಲೆಯಲ್ಲಿ ಕೂದಲು ಸಣ್ಣಗಾಗಿರುವ ಇವಳು ಮರಾಠಿ ಹಾಗೂ ಹಿಂದಿ ಭಾಷೆಯಲ್ಲಿ ಮಾತನಾಡುತ್ತಾಳೆ. ಕಾಣೆಯಾದ ಸಮಯದಲ್ಲಿ ಮೈಮೇಲೆ ಆರೆಂಜ್ ಕಲರ್ ಚೂಡಿದಾರ, ಪೈಜಾಮ ಧರಿಸಿದ್ದಾಳೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಕಾಣೆಯಾದ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಬೀದರ್ ಕಂಟ್ರೋಲ್ ರೂಂ. 94808 03400, ಬೀದರ್ ಪೊಲೀಸ್ ಉಪಾಧೀಕ್ಷಕರ ದೂರವಾಣಿ ಸಂಖ್ಯೆ: 08482-226705, ಮಾರ್ಕೆಟ್ ವೃತ್ತದ ಪೊಲೀಸ್ ನಿರೀಕ್ಷಕರ ಮೊಬೈಲ್ ಸಂಖ್ಯೆ: 94808 03431, ಮಾರ್ಕೆಟ್ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08482-226709 ಮತ್ತು 94808 03447 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.





