ಬೀದರ್ | ಯುವಕ ಕಾಣೆ : ಪತ್ತೆಗಾಗಿ ಮನವಿ

ಬೀದರ್ : ಯುವಕನೊಬ್ಬನು ಕಾಣೆಯಾಗಿದ್ದು, ಎಲ್ಲಿಯಾದರೂ ಪತ್ತೆಯಾದರೆ ತಿಳಿಸಬೇಕು ಎಂದು ಜನವಾಡಾ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ಮೂಲಕ ಕೋರಿದ್ದಾರೆ.
ಬೀದರ್ ನ ಮಮದಾಪೂರ್ ಗ್ರಾಮದ ನಿವಾಸಿ ಸದ್ಯ ಮರಖಲ್ ಗ್ರಾಮದಲ್ಲಿ ವಾಸವಿದ್ದ ಸಂದೀಪ್ ತಂದೆ ಬಾಬು ಖಂದಾರೆ (21) ಇತನು ಅ.16 ರಂದು ಮನೆಯಿಂದ ಹೊರಗಡೆ ಹೋಗಿ ಕಾಣೆಯಾಗಿದ್ದಾನೆ. ಈತನು 5.8 ಅಡಿ ಎತ್ತರ ಇದ್ದು, ದುಂಡು ಮುಖ, ನೀಳ ಮೂಗು, ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಈತ ಕಾಣೆಯಾಗುವ ಸಮಯದಲ್ಲಿ ಮೈಮೇಲೆ ಗೆರೆ ಉಳ್ಳ ಕಪ್ಪು ಬಣ್ಣದ ಟೀ ಶರ್ಟ್, ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಈತನು ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಮಾತನಾಡುತ್ತಾನೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಯುವಕನ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕಲ್ಲಿ ಜನವಾಡಾ ಪೊಲೀಸ್ ಠಾಣೆ ಮೊಬೈಲ್ ಸಂಖ್ಯೆ: 94808 03450, ಸಿಪಿಐ ಬೀದರ್ ಗ್ರಾಮೀಣ ವೃತ್ತ ಮೊಬೈಲ್ ಸಂಖ್ಯೆ: 94808 03439, ಬೀದರ್ ಡಿವೈಎಸ್ಪಿ ಮೊಬೈಲ್ ಸಂಖ್ಯೆ: 94808 03420, ಕಂಟ್ರೋಲ್ ರೂಮ್ ನಂಬರ್ 08482-226700 ಗೆ ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.





