ಬಿಜೆಪಿ ಶಾಸಕ ಪ್ರಭು ಚವ್ಹಾಣ್ ಪುತ್ರನ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಬೀದರ್ : ಶಾಸಕ ಪ್ರಭು ಚವ್ಹಾಣ್ ಅವರ ಪುತ್ರ ಪ್ರತೀಕ್ ಚವ್ಹಾಣ್ ಅವರ ಜಾಮೀನು ಅರ್ಜಿಯು ನ್ಯಾಯಾಲಯವು ವಜಾಗೊಳಿಸಿದೆ ಎಂದು ಸಂತ್ರಸ್ತೆಯ ಪರ ವಕೀಲ ಕೇಶವ್ ಶ್ರೀಮಾಳೆ ತಿಳಿಸಿದ್ದಾರೆ.
ನಾವು ನ್ಯಾಯಾಲಯಕ್ಕೆ ಪ್ರಕರಣದ ತೀವ್ರತೆ, ಸೂಕ್ಷ್ಮತೆ ಮತ್ತು ಆಗಿರುವ ಅನ್ಯಾಯದ ಬಗ್ಗೆ ವಿವರಣೆ ನೀಡಿದ್ದೇವೆ. ಕೆಲವೊಂದು ದಾಖಲೆಗಳು ಸಹಿತ ನೀಡಿದ್ದೇವೆ. ಇದೆಲ್ಲವನ್ನು ಪರಿಗಣಿಸಿದ ನ್ಯಾಯಾಲಯವು ಇವತ್ತು ಪ್ರತೀಕ್ ಪ್ರಭು ಚವ್ಹಾಣ್ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿದೆ ಎಂದಿದ್ದಾರೆ.
ತನಿಖೆಯು ಪ್ರಾಥಮಿಕ ಹಂತದಲ್ಲಿ ಇರುವುದರಿಂದ ಜಾಮೀನು ನೀಡುವುದಕ್ಕೆ ಸಾಧ್ಯವಿಲ್ಲ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ತಿಳಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
Next Story





