ಭಾಲ್ಕಿಯಲ್ಲಿ ಆ.2 ರಂದು ಬೃಹತ್ ರಕ್ತದಾನ ಶಿಬಿರ

ಸಾಂದರ್ಭಿಕ ಚಿತ್ರ
ಭಾಲ್ಕಿ: ನಗರದ ತಳವಾಡೆ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್ ವತಿಯಿಂದ ಆ.2 ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆವರೆಗೆ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ಮುಖ್ಯಸ್ಥೆ ಹಾಗೂ ತಾಲೂಕು ರೋಟರಿ ಕ್ಲಬ್ ಅಧ್ಯಕ್ಷೆ ಡಾ.ಶೈಲಜಾ ತಳವಾಡೆ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ರಸ್ತೆ ಅಪಘಾತಗಳು, ತುರ್ತು ಚಿಕಿತ್ಸೆಗಳು ಹಾಗೂ ಹೆರಿಗೆ ಸಂದರ್ಭಗಳಲ್ಲಿ ರಕ್ತದ ಸಮಸ್ಯೆ ಎದುರಾಗುತ್ತಿದೆ. ಕಾರಣ ಅರ್ಹರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಮುಂದಾಗಿ ಇನ್ನೋಬ್ಬರ ಜೀವ ಉಳಿಸಲು ನೇರವಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.
ರಕ್ತದಾನ ಶಿಬಿರಕ್ಕೆ ರಾಜಯೋಗ ಕೇಂದ್ರದ ಸಂಯೋಜಕಿ ಬ್ರಹ್ಮಕುಮಾರಿ ರಾಧಿಕಾ ಬಹನಜೀ ಅವರು ಚಾಲನೆ ನೀಡಲಿದ್ದಾರೆ. ಸಾರ್ವಜನಿಕ ಆಸ್ಪತ್ರೆಯ ಸಿಎಂಒ ಡಾ.ಶಶಿಕಾಂತ್ ಭೂರೆ, ಬ್ರೀಮ್ಸ್ ಆಸ್ಪತ್ರೆಯ ವೈದ್ಯರು, ರೋಟರಿ ಕ್ಲಬ್ನ ಕಾರ್ಯದರ್ಶಿ ಅಶೋಕ್ ರಾಜೋಳೆ, ಖಜಾಂಚಿ ಅವಿನಾಶ ಮಾಳಗೆ ಸೇರಿದಂತೆ ರೋಟರಿ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.




