ಬೀದರ್ | ಸೆ. 24ರಂದು ರೆಡ್ಡಿ ಜನ ಸಂಘದ ಶತಮಾನೋತ್ಸವ ಕಾರ್ಯಕ್ರಮ : ವೇಮನಾನಂದ ಸ್ವಾಮೀಜಿ

ಬೀದರ್ : ಕರ್ನಾಟಕ ರೆಡ್ಡಿಜನ ಸಂಘವು 100ನೇ ವಸಂತಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಸೆ. 24 ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಗಾಯತ್ರಿ ವಿಹಾರ ಅರಮನೆ ಮೈದಾನದಲ್ಲಿ ಕರ್ನಾಟಕ ರೆಡ್ಡಿ ಜನ ಸಂಘ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಎರೆಹೊಸಹಳ್ಳಿಯ ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವೇಮನಾನಂದ ಸ್ವಾಮೀಜಿ, ಕಾರ್ಯಕ್ರಮದಲ್ಲಿ ನಾಡಿನ ರೆಡ್ಡಿ ಸಮಾಜದ ಪೂಜ್ಯರು, ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ನಮ್ಮ ಸಮುದಾಯದ ಜನಸಂಖ್ಯೆ ಸುಮಾರು 35 ಲಕ್ಷ ಇದೆ. ಆದರೆ ಕಾಂತರಾಜು ವರದಿಯಲ್ಲಿ ಕೇವಲ 7 ಲಕ್ಷ ಜನಸಂಖ್ಯೆ ಮಾತ್ರ ತೋರಿಸಲಾಗಿದೆ. ಇದಕ್ಕೆ ಹಲವಾರು ಕಾರಣಗಳಿರಬಹುದು, ಆದರೂ ರೆಡ್ಡಿ ಕುಲಬಾಂಧವರು ಸೆ. 22 ರಿಂದ ನಡೆಯಲಿರುವ ಸಮೀಕ್ಷೆಯಲ್ಲಿ ಉಪ ಪಂಗಡ ಬರೆಸದೆ ಹಿಂದುಳಿದ ಆಯೋಗದ 1,105 ಸಂಖ್ಯೆ ಅಡಿ ಕೇವಲ ಹಿಂದೂ ರೆಡ್ಡಿ ಎಂದು ಬರೆಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಗುಂಡು ರೆಡ್ಡಿ, ಲಕ್ಷ್ಮಣ ರೆಡ್ಡಿ, ಬಾಬು ರೆಡ್ಡಿ, ಕೃಷ್ಣ ರೆಡ್ಡಿ, ಪ್ರಭಾಕರ್ ರೆಡ್ಡಿ, ರಾಜ್ ರೆಡ್ಡಿ, ಬ್ಯಾಂಕ್ ರೆಡ್ಡಿ, ಶಾಂತ ರೆಡ್ಡಿ ಹಾಗೂ ಶಂಕರ್ ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.







