ಬೀದರ್ | ಶಾಲಾ ಬಸ್ ಹರಿದು ಮೃತ ಬಾಲಕಿಯ ನಿವಾಸಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಭೇಟಿ

ಬೀದರ್: ಎಕಂಬಾ ಗ್ರಾಮದಲ್ಲಿ ಶಾಲಾ ಬಸ್ಸು ಹರಿದು ಮೃತಪಟ್ಟ ಬಾಲಕಿಯ ಮನೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಅವರು ಭೇಟಿ ನೀಡಿ ಬಾಲಕಿಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಸೇಂಟ್ ಪೌಲ್ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ಹಾಗೂ ವಾಹನ ಚಾಲಕನ ನಿರ್ಲಕ್ಷ್ಯತನದಿಂದ ನಮ್ಮ ಮಗು ವಾಹನದ ಚಕ್ರದಲ್ಲಿ ಸಿಲುಕಿ ಮೃತಪಟ್ಟಿದೆ. ಶಾಲೆ ಶುಲ್ಕ ಕಟ್ಟಲು ಫೋನ್ ಮಾಡಿದ ಶಾಲಾ ಆಡಳಿತ ಮಂಡಳಿ, ನಮ್ಮ ಮಗಳು ಪ್ರಾಣ ಬಿಟ್ಟರೂ ಫೋನ್ ಮಾಡಲಿಲ್ಲ. ಇದಕ್ಕೆಲ್ಲ ಚಾಲಕನ ಕುಡಿತವೇ ಕಾರಣ ಎಂದು ಪಾಲಕರು ಕೋಸಂಬೆ ಅವರಲ್ಲಿ ಅಳಲು ತೋಡಿಕೊಂಡರು.
ನಾವು ಬಡವರು, ನಮಗೆ ನ್ಯಾಯ ಕೊಡಿಸಿ. ಇಂತಹ ಘಟನೆ ಮರಕಳಿಸದಂತೆ ಶಾಲೆ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಬಾಲಕಿಯ ತಾಯಿ ಪೂಜಾ ಅವರು ಮನವಿ ಮಾಡಿಕೊಂಡರು.
Next Story





