ಚಿಟಗುಪ್ಪ | ನ. 8ರಿಂದ 10ರವರೆಗೆ ಮಂಗಲಗಿ ದರ್ಗಾ ಜಾತ್ರಾ ಮಹೋತ್ಸವ

ಚಿಟಗುಪ್ಪ: ತಾಲ್ಲೂಕಿನ ಮಂಗಲಗಿ ಗ್ರಾಮದ ಹಜರತ್ ಸೈಯದ್ ಅಮೀರೋದ್ದಿನ್ ಸಾಹೇಬ್ ದರ್ಗಾದ ಜಾತ್ರಾ ಮಹೋತ್ಸವ ನವೆಂಬರ್ 8ರಿಂದ 10ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ನವೆಂಬರ್ 8ರಂದು ರಾತ್ರಿ 9 ಗಂಟೆಗೆ ಸಂದಲ್ ಕಾರ್ಯಕ್ರಮ ನಡೆಯಲಿದೆ. ನವೆಂಬರ್ 9ರಂದು ರಾತ್ರಿ 8.30ಕ್ಕೆ ಚಿರಾಗ್ ದೀಪ ಬೆಳಗಿಸುವ ಕಾರ್ಯಕ್ರಮದ ಬಳಿಕ ಖವಾಲಿ ಗಾಯನ ಆಯೋಜಿಸಲಾಗಿದೆ. ನವೆಂಬರ್ 10ರಂದು ಬೆಳಗ್ಗೆ 8 ಗಂಟೆಗೆ ಪೈಲ್ವಾನರಿಂದ ಜಂಗಿ ಕುಸ್ತಿ ಪಂದ್ಯಗಳು ನಡೆಯಲಿವೆ.
ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ದರ್ಗಾ ಕಮಿಟಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
Next Story




