ಚಿಟಗುಪ್ಪ | ಎಸ್ಐಆರ್ ರದ್ಧತಿಗೆ ಆಗ್ರಹಿಸಿ ಪ್ರತಿಭಟನೆ

ಬೀದರ್ : ಎಸ್ಐಆರ್ ಅನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಚಿಟಗುಪ್ಪ ಪಟ್ಟಣದಲ್ಲಿ ಡಿವೈಎಫ್ಐ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಬಸವರಾಜ್ ವೃತ್ತದಲ್ಲಿ ಡಿವೈಎಫ್ಐ ನ ಪದಾಧಿಕಾರಿಗಳು ಕೇಂದ್ರ ಸರ್ಕಾರ ಹಾಗೂ ಎಸ್ಐಆರ್ ವಿರೋಧಿಸಿ ಘೋಷಣೆಗಳು ಕೂಗಿದರು.
ಈ ಸಂದರ್ಭದಲ್ಲಿ ಡಿವೈಎಫ್ಐ ಜಿಲ್ಲಾಧ್ಯಕ್ಷ ಶಶಿಕಾಂತ್ ಡಾಂಗೆ, ರೇಷ್ಮಾ ಹಂಶರಾಜ್, ಗೌಸೋದ್ದೀನ್, ಪ್ರಭು ಸಂತೋಷಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Next Story




