ಬಸವಕಲ್ಯಾಣ ತಾಲೂಕು ವಲಯ ಅರಣ್ಯಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಬೀದರ್ : ಬಸವಕಲ್ಯಾಣ ತಾಲೂಕಿನ ವಲಯ ಅರಣ್ಯ ಅಧಿಕಾರಿಗಳು ಹುಲಸೂರ್ ತಾಲೂಕು ವ್ಯಾಪ್ತಿಯಲ್ಲಿ ಬರುವ ಮಿರಖಲ್ ಗ್ರಾಮ ಮತ್ತು ಮಿರಖಲ್ ತಾಂಡಾದ ಜನರಿಗೆ ಕಿರುಕುಳ ನೀಡುತ್ತಿದ್ದು, ಅಲ್ಲಿನ ಜನ ತುಂಬಾ ತೊಂದರೆಗೆ ಒಳಗಾಗುತ್ತಿದ್ದಾರೆ. ತಕ್ಷಣವೇ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಎಸ್ಪಿ ಆಗ್ರಹಿಸಿದೆ.
ಬಸವಕಲ್ಯಾಣದ ಸಹಾಯಕ ಆಯುಕ್ತರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಮಿರಖಲ್ ತಾಂಡಾದ ಜನರು ಸುಮಾರು 75 ವರ್ಷಗಳಿಂದ ಅಲ್ಲಿನ ಭೂಮಿ ಸಾಗುವಳಿ ಮಾಡುತ್ತಿದ್ದಾರೆ. ಅವರ ಹತ್ತಿರ ಸಿ.ಫಾರ್ಂ, ತಹಶೀಲ್ದಾರರಿಗೆ ತೆರಿಗೆ ಕಟ್ಟಿರುವ ಪಾವತಿ ಮತ್ತು ಸ್ಮಶಾನ ಭೂಮಿ ಇದೆ. ಆ ಜಮೀನು ಕೂಡ ಅರಣ್ಯ ಅಧಿಕಾರಿಗಳು ತೆರವುಗೊಳಿಸಿದ್ದಾರೆ ಎಂದು ದೂರಲಾಗಿದೆ.
ಹೊಲದಲ್ಲಿ ಬೆಳೆದ ತೊಗರಿ ಬೆಳೆಯಲ್ಲಿ ಜೆಸಿಬಿ ತಂದು ಲಕ್ಷಾಂತರ ರೂಪಾಯಿ ನಷ್ಟ ಮಾಡಿದ್ದಾರೆ. ಇದನ್ನು ವಿರೋಧಿಸಿದರೆ ನಿಮ್ಮನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಅರಣ್ಯ ಅಧಿಕಾರಿಗಳು ಅಲ್ಲಿನ ಜನರಿಗೆ ಹೆದರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಯಾವುದೇ ನೋಟಿಸ್ ನೀಡದೆ ಅರಣ್ಯ ಅಧಿಕಾರಿಗಳು ನಾಲ್ಕು ಜೆಸಿಬಿ ತಂದು ಜನರ ಜಮೀನು ವಶಕ್ಕೆ ಪಡೆದಿದ್ದಾರೆ. ಅಧಿಕಾರಿಗಳು ಗುಂಡಾ ವರ್ತನೆ ತೋರುತ್ತಿದ್ದಾರೆ. ಅವರನ್ನು ಕೂಡಲೆ ಇಲ್ಲಿಂದ ವರ್ಗಾವಣೆ ಮಾಡಿ, ಜನರಿಗೆ ನ್ಯಾಯ ದೊರಕಿಸಿಬೇಕು. ಈದೇ ರೀತಿ ಹಲವು ಗ್ರಾಮಗದಲ್ಲಿ ಯಾವುದೇ ನೋಟಿಸ್ ನೀಡದೆ ಜಮೀನನ್ನು ಸ್ವಾಧಿನ ಪಡೆಸಿಕೊಳ್ಳುತ್ತಿದ್ದಾರೆ. ರಾಜಕೀಯ ವ್ಯಕ್ತಿಗಳು ಹೇಳಿದಾಗ ಕೆಲ ಬಲಾಡ್ಯರ ಜಮೀನಿಗೆ ಏನು ಮಾಡಲಿಲ್ಲ.
ಹುಲಸೂರ್ ತಹಶೀಲ್ದಾರ್ ಅವರಿಗೆ ಅರಣ್ಯ ಅಧಿಕಾರಿ ವಿರುದ್ಧ ದೂರು ನೀಡಿಲಾಗಿತ್ತು. ಆದರೆ ತಹಶೀಲ್ದಾರ್ ಅವರು ಕೂಡ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬೆಳೆ ಹಾನಿಯಾದ ಜನರಿಗೆ ಅರಣ್ಯ ಇಲಾಖೆಯಿಂದ ಪರಿಹಾರ ಒದಗಿಸಿಕೊಡಬೇಕು ಎಂದು ಒತ್ತಾಯಿಸಲಾಗಿದೆ.
ಇಂತಹ ಅಧಿಕಾರಿಗಳ ಮೇಲೆ ಕಾನೂನಿ ಕ್ರಮ ಕೈಗೊಂಡು, ಜನರಿಗೆ ನ್ಯಾಯ ಒದಗಿಸಿಕೊಡಬೇಕು. ಒಂದು ವೇಳೆ ತಪ್ಪಿದ್ದಲ್ಲಿ ಕಚೇರಿಯ ಎದುರಗಡೆ ಹೊರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಬಿಎಸ್ಪಿ ತಾಲೂಕು ಅಧ್ಯಕ್ಷ ಶಂಕರ್ ಫುಲೆ, ರಾಜ್ಯ ಕಾರ್ಯದರ್ಶಿಗಳಾದ ಅಶೋಕ್ ಮಂಠಾಳಕರ್, ಜ್ಞಾನೇಶ್ವರ್ ಸಿಂಗಾರೆ, ಉಪಾಧ್ಯಕ್ಷ ರಮೇಶ್ ರಾಠೋಡ್, ಪ್ರಧಾನ ಕಾರ್ಯದರ್ಶಿ ರವಿ ಉದಾತೆ, ಕಾರ್ಯದರ್ಶಿಗಳಾದ ಮಹಾದೇವ್ ಗಾಯಕವಾಡ್, ಚಂದ್ರಕಾಂತ್ ಲಂಗಡೆ, ನಗರಘಟಕದ ಸಂಯೋಜಕ ಮಸ್ತಾನಸಾಬ್ ಲದಾಫ, ವಿಷ್ಣುಕಾಂತ್ ಸೂರ್ಯವಂಶಿ ಸೇರಿದಂತೆ ಇತರರು ಇದ್ದರು.







