ಮಹಿಳೆಯರ ಬಗ್ಗೆ ಅವಹೇಳನ | ಬಿಜೆಪಿ ಶಾಸಕ ಶರಣು ಸಲಗರ್‌ಗೆ ಮಹಿಳಾ ಆಯೋಗದಿಂದ ಪತ್ರ : ಡಾ. ನಾಗಲಕ್ಷ್ಮೀ ಚೌಧರಿ

ಬೀದರ್ : ಇತ್ತೀಚೆಗೆ ರೈತರ ಪ್ರತಿಭಟನೆಯಲ್ಲಿ ಮಹಿಳೆಯರನ್ನು ಅವಾಚ್ಯವಾಗಿ ನಿಂದಿಸಿದ ಬಸವಕಲ್ಯಾಣದ ಶಾಸಕ ಶರಣು ಸಲಗರ್ ಅವರಿಗೆ ಮಹಿಳಾ ಆಯೋಗದಿಂದ ಪತ್ರ ಕಳುಹಿಸಲಾಗಿದೆ. ಅದಕ್ಕೆ ಅವರು ಉತ್ತರ ನೀಡಬೇಕಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ತಿಳಿಸಿದರು.
ಇಂದು ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಇಂತಹ ಕೀಳು ಮನಸ್ಥಿತಿ ಇರುವವರು ಬದಲಾಗಬೇಕು. ಸರಕಾರ, ಕಾನೂನು, ಪೊಲೀಸ್ ಎಲ್ಲವೂ ಇದೆ. ಆದರೆ, ಸಮಾಜ ಇನ್ನು ಬಹಳಷ್ಟು ಬದಲಾಗಬೇಕಿದೆ ಎಂದರು.
"ಬಡತನದಿಂದ ಹೆಣ್ಣುಮಕ್ಕಳು ವೇಶ್ಯವಾಟಿಕೆ ಕೆಲಸ ಮಾಡುತ್ತಿದ್ದಾರೆ. ಇದನ್ನು ಸಾಕ್ಷಿ ಸಮೇತವಾಗಿ ನಾನು ತೋರಿಸಲು ಸಿದ್ದನಿದ್ದೇನೆ" ಎಂದು ಇತ್ತೀಚೆಗೆ ರೈತರ ಪ್ರತಿಭಟನೆಯಲ್ಲಿ ಬಸವಕಲ್ಯಾಣದ ಶಾಸಕ ಶರಣು ಸಲಗರ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.
Next Story





