ಡಾ.ಅಂಬೇಡ್ಕರ್ ಅವರ ತತ್ವ ಸಿದ್ಧಾಂತವನ್ನು ನಾವೆಲ್ಲರೂ ಪಾಲಿಸಬೇಕಾಗಿದೆ : ಮಹೇಶ್ ತೇಗಂಪುರೆ

ಬೀದರ್ : ಡಾ.ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ನಾವೆಲ್ಲರೂ ಪಾಲಿಸಬೇಕಾಗಿದೆ. ಆಗ ಮಾತ್ರ ಸಮಾನತೆ ಬರಲು ಸಾಧ್ಯವಿದೆ ಎಂದು ಮಹೇಶ್ ತೇಗಂಪುರೆ ತಿಳಿಸಿದರು.
ಭಾಲ್ಕಿ ತಾಲೂಕಿನ ಕುಂಟೆಸಿರ್ಸಿ ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಮಹೇಶ್ ತೇಗಂಪುರೆ, 1956ರ ಡಿ. 6 ರಂದು ಅಂಬೇಡ್ಕರ್ ಅವರು ನಮ್ಮನ್ನೆಲ್ಲ ಬಿಟ್ಟು ಹೋಗಿರಬಹುದು. ಆದರೆ ಅವರ ವಿಚಾರಗಳು, ತತ್ವ ಸಿದ್ಧಾಂತ ಇನ್ನು ಕೂಡ ಜಿವಂತವಾಗಿವೆ. ನಾವೆಲ್ಲರೂ ಅವರ ತತ್ವ ಸಿದ್ಧಾಂತದಡಿಯಲ್ಲಿ ಸಾಗಿದರೆ ಅವರು ಕಂಡಂತಹ ಸಮಾನತೆಯ ಕನಸು ನನಸು ಮಾಡಬಹುದು ಎಂದರು.
ಇಂದಿನ ಯುವ ಪೀಳಿಗೆ ಕೆಟ್ಟ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಮೊಬೈಲ್ ಗೀಳಿಗೆ ಒಳಗಾಗಿ ಪುಸ್ತಕದಿಂದ ದೂರ ಉಳಿಯುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ನಾವು ಅಂಬೇಡ್ಕರ್ ಅವರ ತತ್ವದಡಿ ಸಾಗಲು ಸಾಧ್ಯವಿಲ್ಲ. ಹಾಗಾಯೇ ಅಂಬೇಡ್ಕರ್ ಅವರು ಕಂಡ ಕನಸು ನನಸು ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಯುವ ಜನತೆ ಕೆಟ್ಟ ಚಟಗಳಿಗೆ ಬಲಿಯಾಗದೆ ಉತ್ತಮ ಸಮಾಜ ನಿರ್ಮಾಣ ಮಾಡಲು ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಮಖಂಡರಾದ ರವಿಕುಮಾರ್ ಶೇರಿಕಾರ್, ಜಗನ್ನಾಥ್ ಶೇರಿಕಾರ್, ಜೈರಾಜ್ ಕಾಂಬಳೆ, ರಘುನಾಥ್ ಸಿರ್ಸಿಕರ್,ಕಾಶಿನಾಥ್ ಕಾಂಬಳೆ, ಯುವ ಮುಖಂಡರಾದ ಲೊಕೇಶ್ ಸುಣಗಾರ್, ವಿಲಾಸ್ ತೇಗಂಪೂರೆ, ಆನಂದ್ ಸುಣಗಾರ್, ಶಿವುಕುಮಾರ್ ಕಾಂಬಳೆ, ಮಲ್ಲಿಕಾರ್ಜುನ್ ಮಚುಕುರೆ, ಯುವರಾಜ್ ಕಾಂಬಳೆ, ಅಂತೀಶ್ ಮೇಡಪಳ್ಯ, ಕಲ್ಲಪ್ಪ ಮೇತ್ರೆ, ಸಂತೋಷ್ ಕಾಂಬಳೆ, ತುಳಜಪ್ಪಾ ತೇಗಂಪೂರೆ ಹಾಗೂ ರಾಹುಲ್ ಮೇತ್ರೆ ಉಪಸ್ಥಿತರಿದ್ದರು.







