ದಸರಾ ಸಿಎಂ ಕಪ್ | ಬಾಕ್ಸಿಂಗ್ ವಿಭಾಗದಲ್ಲಿ ಬೀದರ್ ಜಿಲ್ಲೆಗೆ 7 ಪದಕ

ಬೀದರ್ : ವಿಶ್ವವಿಖ್ಯಾತ ನಾಡ ಹಬ್ಬ ದಸರಾ ಪ್ರಯುಕ್ತವಾಗಿ ಹಮ್ಮಿಕೊಳ್ಳಲಾದ ದಸರಾ ಸಿಎಂ ಕಪ್ ಕ್ರೀಡಾಕೂಟ ಬಾಕ್ಸಿಂಗ್ ವಿಭಾಗದಲ್ಲಿ ಬೀದರ್ ಜಿಲ್ಲೆಯ ವಿದ್ಯಾರ್ಥಿಗಳು 7 ಪದಕ ಗೆದ್ದಿದ್ದಾರೆ.
ಗುರುವಾರ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ದಸರಾ ಸಿಎಂ ಕಪ್ ಕ್ರೀಡಾಕೂಟದಲ್ಲಿ ಬಾಕ್ಸಿಂಗ್ ವಿಭಾಗದಲ್ಲಿ ಬೀದರ್ ಜಿಲ್ಲೆಯ ವಿದ್ಯಾರ್ಥಿಗಳು ಒಂದು ಚಿನ್ನ, ಒಂದು ಬೆಳ್ಳಿ, ಐದು ಕಂಚು ಸೇರಿ ಒಟ್ಟು ಏಳು ಪದಕಗಳು ಗೆದ್ದಿದ್ದಾರೆ.
ಸ್ಟೀವನ್ ಚಿನ್ನದ ಪದಕ, ವಿರೇಂದ್ರ ಬೆಳ್ಳಿ ಪದಕ ಹಾಗೂ ನಾಗರಾಜ್ ವರ್ಮಾ, ಶಶಿಕಾಂತ್, ವಿಕ್ಕಿ, ಅಂಜಲಿ ಮತ್ತು ಕವಿತಾ ಕಂಚಿನ ಪದಕ ಗೆದ್ದಿದ್ದಾರೆ.
Next Story





