ಬೀದರ್ : ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಜು.9 ರಂದು ಸಾರ್ವತ್ರಿಕ ಮುಷ್ಕರ

ಬೀದರ್ : ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಜು.9 ರಂದು ಸಾರ್ವತ್ರಿಕ ಮುಷ್ಕರ ಮಾಡಲಾಗುವುದು ಎಂದು ಕಾರ್ಮಿಕ ಸಂಘಗಳು ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಜಂಟಿಯಾಗಿ ಸಭೆ ನಡೆಸಿ ತೀರ್ಮಾನಿಸಿವೆ.
ಇಂದು ನಗರದ ಸ್ಟಾರ್ ಲಾಡ್ಜ್ ಸಭಾಂಗಣದಲ್ಲಿ ನಡೆಸಿರುವ ಸಭೆಯಲ್ಲಿ ಮುಷ್ಕರ ಮಾಡಲು ನಿರ್ಧರಿಸಲಾಗಿದ್ದು, ಹಳ್ಳಿಖೇಡ್ ನ ಬಿ ಎಸ್ ಎಸ್ ಕೆ ಕಾರ್ಮಿಕರು, ಬಗರ್ ಹುಕುಂ ಸಾಗುವಳಿದಾರರು, ರೈತರು, ಕಾರ್ಮಿಕರು, ಅಂಗನವಾಡಿ, ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತೆರರು ಅಂದು ಮಧ್ಯಾಹ್ನ 12 ಗಂಟೆಗೆ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸೇರಬೇಕು ಎಂದು ತಿಳಿಸಲಾಗಿದೆ.
ಮುಷ್ಕರ ಹೂಡಿ ರೈತರ, ಬಿ.ಎಸ್.ಎಸ್.ಕೆ ಸಮಸ್ಯೆ, ಅಂಗನವಾಡಿ, ಬಿಸಿಯೂಟ ಮತ್ತು ಆಶಾ ಕಾರ್ಯಕರ್ತೆಯರ, ನಿವೃತ್ತಿ ಹೊಂದಿರುವ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಕಟ್ಟಡ ಕಾರ್ಮಿಕರ ಸಮಸ್ಯೆಗಳು ಬಗೆಹರಿಸಬೇಕು ಎಂದು ಒತ್ತಾಯಿಸಲಾಗುವದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ಸಂದರ್ಭದಲ್ಲಿ ಜೆ.ಸಿ.ಟಿ.ಯು ಸಂಚಾಲಕ ಬಾಬುರಾವ್ ಹೊನ್ನಾ, ಸಂಯುಕ್ತ ಕಿಸಾನ್ ಮೋರ್ಚಾದ ಸಂಚಾಲಕ ನಜೀರ್ ಅಹಮದ್, ಕಟ್ಟಡ ಕಾರ್ಮಿಕ ಸಂಘ (ಎ.ಐ.ಟಿ.ಯು.ಸಿ) ಅಧ್ಯಕ್ಷ ಎಂ.ಡಿ. ಶಫಾಯತ್ ಅಲಿ, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ಚಂದ್ರಕಲಾ ಕಮಠಾಣಕರ್, ಭಾರತೀಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶೀಲಾ ಸಾಗರ್, ಆರ್.ಪಿ. ರಾಜಾ, ಮಹೇಶ್ ನಾಡಗೌಡಾ, ಬಿ.ಎಸ್.ಎಸ್.ಕೆ. ಯ ನಿವೃತ್ತ ನೌಕರ ಸಿದ್ರಾಮಪ್ಪಾ ಉಪಸ್ಥಿತರಿದ್ದರು.