ಪಹಲ್ಗಾಮ್ ಭಯೋತ್ಪಾದಕ ದಾಳಿ: ಮೃತರಿಗೆ ಹೀಲಿಂಗ್ ಟ್ರೀ ಆಸ್ಪತ್ರೆಯಿಂದ ಶ್ರದ್ಧಾಂಜಲಿ

ಬೀದರ್ : ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದವರನ್ನು ಹೀಲಿಂಗ್ ಟ್ರೀ ಆಸ್ಪತ್ರೆಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಇಂದು ನಗರದ ರೋಟರಿ ವೃತ್ತದಲ್ಲಿ ಕೆಲ ನಿಮಿಷಗಳ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದ ಅಮಾಯಕರ ಜೀವಗಳಿಗೆ ಗೌರವ ಸಲ್ಲಿಸಿಲಾಯಿತು.
ಹೀಲಿಂಗ್ ಟ್ರೀ ಆಸ್ಪತ್ರೆಯು ರಾಷ್ಟ್ರೀಯ ದುಃಖದ ಸಮಯದಲ್ಲಿ ಶಾಂತಿ, ಸಹಾನುಭೂತಿ ಮತ್ತು ಏಕತೆಯನ್ನು ಉತ್ತೇಜಿಸಲು ಬದ್ಧವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಆಸ್ಪತ್ರೆಯ ಎಲ್ಲಾ ವೈದ್ಯರು, ಸಿಬ್ಬಂದಿಗಳು, ಪೊಲೀಸ್ ಪ್ರತಿನಿಧಿ ಮತ್ತು ಸ್ಥಳೀಯ ನಾಗರಿಕರು ಭಾಗವಹಿಸಿದ್ದರು.
Next Story





