ಬೀದರ್‌ನಲ್ಲಿ ಗುಡುಗು ಸಹಿತ ಭಾರಿ ಮಳೆ

ಬೀದರ್ : ಜಿಲ್ಲೆಯ ಹಲವು ಕಡೆ ಇಂದು ಸಾಯಂಕಾಲ ಗುಡುಗು ಸಹಿತವಾಗಿ ಭಾರಿ ಮಳೆಯಾಗಿದೆ. ಜಿಲ್ಲೆಯಲ್ಲಿ ಇಂದು ಮುಂಜಾನೆಯಿಂದ ಮಧ್ಯಾಹ್ನದವರೆಗೆ ಬಿಸಿಲಿನ ವಾತಾವರಣವಿತ್ತು. ಸಾಯಂಕಾಲ ಸಮಯದಲ್ಲಿ ಮೋಡವಾಗಿ ಗುಡುಗು ಹಾಗೂ ಬಿರುಗಾಳಿ ಸಹಿತ ಮಳೆಯಾಗಿದೆ.
ಬೀದರ್ ನಗರ ಸೇರಿದಂತೆ ನೌಬಾದ್ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಭಾರಿ ಮಳೆಯಾಗಿದೆ.
ಜಿಲ್ಲೆಯಲ್ಲಿ ಇಂದು ಸೇರಿದಂತೆ ರವಿವಾರ ಹಾಗೂ ಸೋಮವಾರ ಇದೆ ರೀತಿಯ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
Next Story





