ಹುಮನಾಬಾದ್ | ಬೆಳಕೇರಾ ಗ್ರಾಮದಲ್ಲಿ ಮಹಿಳೆಯರಿಗೆ ನರೇಗಾ ಕೂಲಿ ಕೆಲಸ ನೀಡುವಂತೆ ದಸಂಸ ಆಗ್ರಹ

ಹುಮನಾಬಾದ್ : ಚಿಟಗುಪ್ಪಾ ತಾಲೂಕಿನ ಬೆಳಕೇರಾ ಗ್ರಾಮದಲ್ಲಿ ಸುಮಾರು ಆರು ತಿಂಗಳಿಂದ ನರೇಗಾ ಕೂಲಿ ಕೆಲಸ ನೀಡುತ್ತಿಲ್ಲ. ಅಲ್ಲಿನ ಮಹಿಳೆಯರಿಗೆ ನರೇಗಾ ಕೂಲಿ ಕೆಲಸ ಒದಗಿಸಬೇಕು ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಯಿಂದ ಆಗ್ರಹಿಸಲಾಯಿತು.
ಗುರುವಾರ ಬೆಳಕೇರಾ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಸಂಘಟನೆಯ ಮುಖಂಡರು ಸೇರಿ, ಅಲ್ಲಿನ ಮಹಿಳೆಯರಿಗೆ ನರೇಗಾ ಕೂಲಿ ಕೆಲಸ ನೀಡಬೇಕು. ಬೆಳಕೇರಾ ಗ್ರಾಮದ ಮಹಿಳೆಯರು ನಮ್ಮಲ್ಲಿ ಬಂದು ತಮ್ಮ ಪಂಚಾಯತ್ ನಲ್ಲಿ ನರೇಗಾ ಕೂಲಿ ಕೆಲಸ ನೀಡುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಹಾಗಾಗಿ ಗ್ರಾಮ ಪಂಚಾಯತಿಗೆ ಬಂದು ಕೆಲಸ ನೀಡುವಂತೆ ಒತ್ತಾಯಿಸುತ್ತಿದ್ದೇವೆ. ಆ ಗ್ರಾಮದ ಮಹಿಳೆಯರಿಗೆ ತಕ್ಷಣವೇ ಕೆಲಸ ನೀಡಬೇಕು ಎಂದು ಸಂಘಟನೆಯ ಮುಖಂಡರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ರಾಹುಲ್ ಉದ್ದಾ, ಕಾರ್ಮಿಕ ಸಂಘದ ಅಧ್ಯಕ್ಷ ಶಶಿಕಾಂತ್ ಡಾಂಗೆ, ಸುರೇಶ್ ಘಾಂಗ್ರೆ, ಶಿವಾನಂದ್ ಕಟ್ಟಿಮನಿ, ಶ್ರೀನಿವಾಸ್ ಕಟ್ಟಿಮನಿ, ಸಂತೋಷ್ ಅತಿವಾಳ್, ಶರಣಪ್ಪ ಮೇತ್ರೆ ಹಾಗೂ ಶಿವರಾಜ್ ಸಿಂಧನಕೇರಾ ಸೇರಿದಂತೆ ಇತರರು ಇದ್ದರು.





