ಬೀದರ್: ಐಡಿಯಲ್ ಗ್ಲೋಬಲ್ ಶಾಲೆಗೆ ಸಿಬಿಎಸ್ಇಯಲ್ಲಿ ಸತತ 11ನೇ ವರ್ಷ ಶೇ. 100 ಫಲಿತಾಂಶ

ಬೀದರ್: ಬಸವಕಲ್ಯಾಣ ನಗರದ ಐಡಿಯಲ್ ಗ್ಲೋಬಲ್ ಶಾಲೆಗೆ ಪ್ರಸಕ್ತ ವರ್ಷ ಸಿಬಿಎಸ್ಇ ಬೋರ್ಡ್ ನಡೆಸಿದ 10ನೇ ತರಗತಿ ಪರೀಕ್ಷೆಯಲ್ಲಿ ಶಾಲೆಗೆ ಶೇ.100 ರಷ್ಟು ಫಲಿತಾಂಶ ಬಂದಿದ್ದು, ಈ ಶಾಲೆಗೆ ಸತತವಾಗಿ 11ನೇ ವರ್ಷ ಶೇ.100 ರಷ್ಟು ಫಲಿತಾಂಶ ಬಂದಂತಾಗಿದೆ.
ಈ ಶಾಲೆಯಲ್ಲಿ ಒಟ್ಟು 77 ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಬರೆದಿದ್ದು, ಎಲ್ಲರೂ ಪಾಸಾಗಿದ್ದಾರೆ. 77 ವಿದ್ಯಾರ್ಥಿಗಳಲ್ಲಿ 29 ವಿದ್ಯಾರ್ಥಿಗಳು ಅಗ್ರಶ್ರೇಣಿ, 28 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 20 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಅದಿಲ್ ತಂದೆ ಹಬೀಬ್ ಶೇಖ್ ಶೇ.94, ಮೊಹಮ್ಮದ್ ಕೈಫ್ ತಂದೆ ನಿಸಾರ್ ಅಹ್ಮದ್ ಶೇ.90.8 , ಸೈದ್ ಅಬು ತಾಲಿಬ್ ತಂದೆ ಸೈದ್ ನವಾಬ್ ಶೇ.90.4, ವೈಷ್ಣವಿ ತಂದೆ ರವೀಂದ್ರ ಪಾಟೀಲ್ ಶೇ.89.6, ಮೊಹಮ್ಮದ್ ಖಾಜಾ ತಂದೆ ಎಂ.ಡಿ ಮಸ್ತಾನ್ ಅಲಿ ಶೇ.89.6, ನಾಯೆಮ್ಮ ನಾಹಿನ್ ತಂದೆ ರಿಯಾಜ್ ಅಹ್ಮದ್ ಖುರೇಶಿ ಶೇ.89.2, ಅಭಿನವ್ ತಂದೆ ಅನಿಲ್ ಭೋಸ್ಲೆ ಶೇ.89.2, ಅಮೃತ್ ತಂದೆ ಸಂಗಾರೆಡ್ಡಿ ಶೇ.88.8, ಕೀರ್ತನಾ ತಂದೆ ಚನ್ನಬಸಪ್ಪ ಶೇ.86.2 ಹಾಗೂ ಸೈದ್ ಅಮತುಲ್ ತಂದೆ ಸ್ಯೆದ್ ಉಸಾಮಾನ್ ಅಬ್ಬಾಸಿ ಶೇ.84.6 ಪಡೆದಿದ್ದಾರೆ.
10ನೇ ತರಗತಿಯ ವಿದ್ಯಾರ್ಥಿಗಳು ಶ್ರೇಷ್ಠ ಸಾಧನೆ ಮಾಡಿದ್ದಾರೆ. ಇದರಿಂದಾಗಿ ನಮಗೆ ಹೆಮ್ಮೆಯಾಗಿದೆ. ಉತ್ತಮ ಅಂಕ ಪಡೆದು ಸಾಧನೆ ಮಾಡಿದ್ದಾರೆ. ಇದರಿಂದಾಗಿ ನಮ್ಮ ಶಾಲೆಗೆ ಒಳ್ಳೆ ಹೆಸರು ಬಂದಿದೆ. ಸತತವಾಗಿ 11ನೇ ಸಲ ನಮ್ಮ ಶಾಲೆಗೆ ಶೇ.100 ರಷ್ಟು ಫಲಿತಾಂಶ ಬಂದಿದ್ದು ನಮಗೆ ಖುಷಿ ನೀಡಿದೆ ಎಂದು ಸಂಸ್ಥೆಯ ಸಂಸ್ಥಾಪಕ ಮುಜಾಹಿದ್ ಪಾಶಾ ಖುರೇಷಿ ಹಾಗೂ ಪ್ರಾಂಶುಪಾಲ ಬಾಸಿಲೊದ್ದೀನ್ ಆಜಾದ್ ಹಾಗೂ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.







