Bidar |ಬಾವಿಯೊಳಗೆ ಎರಡು ತಿಂಗಳ ಶಿಶುವಿನ ಮೃತದೇಹ ಪತ್ತೆ; ಕೊಲೆ ಶಂಕೆ

ಔರಾದ್: ತಾಲ್ಲೂಕಿನ ವಡಗಾಂವ್ (ದೆ ) ಗ್ರಾಮದಲ್ಲಿ ಎರಡು ತಿಂಗಳ ಗಂಡು ಮಗುವಿನ ಶವ ಬಾವಿಯಲ್ಲಿ ಪತ್ತೆಯಾಗಿದ್ದು, ಮಗುವನ್ನು ಬಿಸಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಪತ್ತೆಯಾದ ಮಗು ವಾಣಿಶ್ರೀ ಎಂಬವರದ್ದು ಎಂದು ತಿಳಿದು ಬಂದಿದೆ.
"ನನ್ನ ಮಗುವಿಗೆ ನನ್ನ ಹೆಂಡತಿ, ಮಾವ, ಅತ್ತೆ, ಭಾವ ಒಟ್ಟು ನಾಲ್ಕು ಜನ ಸೇರಿಕೊಂಡು ಕೊಲೆ ಮಾಡಿ ಬಾವಿಗೆ ಹಾಕಿದ್ದಾರೆ. ಇವರನ್ನು ತಕ್ಕ ಶಿಕ್ಷೆಗೆ ಒಳಪಡಿಸಬೇಕು" ಎಂದು ನವಜಾತ ಶಿಶುವಿನ ತಂದೆ ಸಂಜು ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ಸಂಬಂಧ ಶಿಶುವಿನ ತಾಯಿ ವಾಣಿಶ್ರೀ (32), ಮಗುವಿನ ಸೋದರ ಮಾವ ಸಂತೋಷ್ ಮಸ್ಕಲೆ (35), ಅಜ್ಜ ಬಸಪ್ಪ (70), ಅಜ್ಜಿ ಬಸಮ್ಮಾ (65) ಅವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಸಿಪಿಐ ರಘುವೀರ ಸಿಂಗ್ ಠಾಕೂರ್, ಪಿಎಸ್ಐ ದಿನೇಶ್ ಎಂ ಟಿ ನೇತೃತ್ವ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಕುರಿತು ಸಂತಪೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




