ಕಮಲನಗರ್ | ಈಜಲು ಹೋದ ಯುವಕ ನೀರು ಪಾಲು

ಕಮಲನಗರ್ : ತಾಲೂಕಿನ ಬಳತ್ (ಬಿ) ಗ್ರಾಮದ ಹೊರವಲಯದ ಮಾಂಜ್ರಾ ನದಿಯಲ್ಲಿ ಸ್ನೇಹಿತರೊಂದಿಗೆ ಈಜಲು ಹೋದ ಯುವಕನೊಬ್ಬ ನೀರುಪಾಲಾಗಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಬಳತ್ (ಬಿ) ಗ್ರಾಮದ ಯುವರಾಜ್ ಚಿದ್ರೆ (28) ನೀರುಪಾಲಾದ ಯುವಕನಾಗಿದ್ದಾನೆ.
ಶನಿವಾರ ಬೆಳಗ್ಗೆ 9 ಗಂಟೆಗೆ ಸುಮಾರಿಗೆ ಮೂವರು ಸ್ನೇಹಿತರೊಂದಿಗೆ ಮಾಂಜ್ರಾ ನದಿಯಲ್ಲಿ ಈಜಲು ತೆರಳಿದ್ದರು. ಯುವರಾಜನಿಗೆ ಈಜು ಬಾರದ ಹಿನ್ನೆಲೆ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಈ ಘಟನೆ ತಿಳಿದ ತಕ್ಷಣ ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿ, ಈಜು ತಜ್ಞರು ಹಾಗೂ ಗ್ರಾಮಸ್ಥರ ತಂಡ ಬೋಟ್ ಮೂಲಕ ಶೋಧ ಕಾರ್ಯಚರಣೆ ಕೈಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
Next Story




