ಕೆಪಿಸಿಸಿ ಬೀದಿ ಬದಿ ವ್ಯಾಪಾರಸ್ಥರ ಹುಮನಾಬಾದ್ ತಾಲೂಕು ಘಟಕದ ಅಧ್ಯಕ್ಷರಾಗಿ ಅಶ್ವಾಕ್ ಅಹ್ಮದ್ ನೇಮಕ

ಹುಮನಾಬಾದ್ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಬೀದಿ ಬದಿ ವ್ಯಾಪಾರಸ್ಥರ ಹುಮನಾಬಾದ್ ತಾಲೂಕು ಪದಾಧಿಕಾರಿಗಳ ಸಂಘದ ತಾಲೂಕು ಘಟಕದ ಅಧ್ಯಕ್ಷರಾಗಿ ಅಶ್ವಾಕ್ ಅಹ್ಮದ್ ಅವರು ನೇಮಕವಾಗಿದ್ದಾರೆ.
ತಾಲೂಕಿನ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಬೀದಿ ಬದಿ ವ್ಯಾಪಾರಸ್ಥರ ಜಿಲ್ಲಾಧ್ಯಕ್ಷ ಹಾಗೂ ಜಿಲ್ಲಾ ಉಪಾಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ನೂತನವಾಗಿ ಹುಮನಾಬಾದ್ ತಾಲೂಕಾಧ್ಯಕ್ಷರಾಗಿ ಅಶ್ವಾಕ್ ಅಹ್ಮದ್, ಉಪಾಧ್ಯಕ್ಷರಾಗಿ ಎಂ ಡಿ ಅಝರ್, ಕಾರ್ಯದರ್ಶಿಗಳಾಗಿ ಎಂ ಡಿ ಇಸ್ಮಾಯಿಲ್ , ಎಂ ಡಿ ಮಸ್ತಾನ್ ಹಾಗೂ ಎಂ ಡಿ ಅಲ್ತಾಫ್, ಜಂಟಿ ಕಾರ್ಯದರ್ಶಿಗಳಾಗಿ ಎಂ ಡಿ ಫೀರೋಜ್ ಹಾಗೂ ಎಂ ಡಿ ಸಲಾಉದ್ದೀನ್ ಅವರನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಯುವ ಸೇನೆಯ ರಾಜ್ಯ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಸುರೇಶ್ ಘಾಂಗ್ರೆ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬೀದಿ ಬದಿ ವ್ಯಾಪಾರಸ್ಥರ ಜಿಲ್ಲಾಧ್ಯಕ್ಷ ಪುಟ್ಟರಾಜ್ ಹಲಗೆ, ಜಿಲ್ಲಾ ಉಪಾಧ್ಯಕ್ಷ ವಿಲಾಸ್ ಮೇತ್ರೆ, ದಲಿತ್ ಪ್ಯಾಂಥರ್ ಉಪಾಧ್ಯಕ್ಷ ಶಿವಾನಂದ್ ಕಟ್ಟಿಮನಿ ಹಾಗೂ ಅರುಣ್ ಕಲ್ಲೂರ್ ಸೇರಿದಂತೆ ಹಲವು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.





