ಬೀದರ್ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಸಂಚಾರ : ಎಚ್ಚರ ವಹಿಸಲು ಸಾರ್ವಜನಿರಲ್ಲಿ ಮನವಿ

ಬೀದರ್: ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದು ಬೀದರ್ ಜಿಲ್ಲಾ ಉಪ ಸಂರಕ್ಷಣಾಧಿಕಾರಿಆಶಿಷ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿರತೆ ಸಂಚಾರ ಕಂಡುಬಂದಿರುವ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಡಂಗೂರಿನ ಮೂಲಕ ಎಚ್ಚರಿಕೆ ನೀಡಲಾಗುತ್ತಿದ್ದು, ಗ್ರಾಮ ಸಭೆಗಳನ್ನು ನಡೆಸಿ ಅಗತ್ಯ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಸೂರ್ಯಾಸ್ತದ ನಂತರ ಮಕ್ಕಳನ್ನು ಮನೆ ಒಳಗಡೆ ಇರಿಸಿ, ರಾತ್ರಿ ಸಂಚರಿಸುವ ವೇಳೆ ಟಾರ್ಚ್ ಅಥವಾ ಬೆಳಕಿನ ವ್ಯವಸ್ಥೆ ಬಳಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಚಿರತೆ ಕಂಡುಬಂದಿರುವ ಬಗ್ಗೆ ಆಯಾ ಗ್ರಾಮಗಳಲ್ಲಿ ಬಿತ್ತಿ ಪತ್ರಗಳನ್ನು ಅಂಟಿಸಲಾಗುತ್ತಿದೆ. ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಕಂಡುಬಂದರೆ ತಕ್ಷಣವೇ ಅರಣ್ಯ ಇಲಾಖೆಯ ಆರ್ ಎಫ್ ಓ ವಿಜಯಕುಮಾರ ಜಾಧವ್ ಫೋನ್ : 95913 17807, ಡಿ ಆರ್ ಎಫ್ ಓ ರವಿ ಫೋನ್ : 99005 61007 ಡಿ ಆರ್ ಎಫ್ ಓ ಆರ್ ಎಲ್ ರಾಠೋಡ್ 86180 02638, ಬಿಟ್ ಫಾರೇಸ್ಟರ್ ಪರಶುರಾಮ್ ಫೋನ್ : 98451 12328, ಅರಣ್ಯ ಸಹಾಯವಾನಿ ಸಂಖ್ಯೆ: 1926 ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದ್ದಾರೆ.







